
ಮಂಗಳೂರು, ಸೆ.20: ಮಂಗಳೂರು : ರುಂಡವೊಂದು ಕಡೆ ಮುಂಡವೊಡು ಕಡೆ ಬಿದ್ದಿರುವ ಸ್ಥಿತಿಯಲ್ಲಿ ಯುವಕನೋರ್ವನ ಶವ ನಗರದ ಮೋರ್ಗನ್ಸ್ ಗೇಟ್ ಸಮೀಪದ ಮಹಾಕಾಳಿ ಪಡ್ಪು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.
ಮೃತಪಟ್ಟ ಯುವಕನನ್ನು ಮಂಗಳೂರಿನ ಕಂಕನಾಡಿಯ ನಿವಾಸಿ ವಿಕ್ಟರ್ ಜಾಕ್ಸನ್ ಡಿಸೋಜ (23) ಎಂದು ಗುರುತಿಸಲಾಗಿದ್ದು, ಈತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.