ಮನೋರಂಜನೆ

ಕಾವೇರುತ್ತಿರುವ ‘ಕಾವೇರಿ’ ವಿವಾದದ ಮಧ್ಯೆ ತಮಿಳು ಪ್ರೇಮ ಮೆರೆದ ನಟಿ ಮಾಳವಿಕಾ ಅವಿನಾಶ್ ! ಅವರು ಫೇಸ್‍ಬುಕ್‍ನಲ್ಲಿ ಹಾಕಿದ ಸ್ಟೇಟಸ್ ಏನು…?

Pinterest LinkedIn Tumblr

malavika

ಬೆಂಗಳೂರು: ಕಾವೇರಿ ವಿಚಾರ ಸಂಬಂಧ ರಾಜ್ಯ ಭಾರೀ ಗಂಡಾಂತರ ಎದುರಿಸುತ್ತಿರುವಾಗ ಚಿತ್ರನಟಿ ಮಾಳವಿಕಾ ಅವಿನಾಶ್ ತಮಿಳು ಪ್ರೇಮ ಮೆರೆದಿದ್ದಾರೆ. ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಅನ್ನಿ ಧಾರಾವಾಹಿಯಲ್ಲಿ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ವಿವಾದದಲ್ಲಿ ಸಿಲುಕಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಅನ್ನಿ ಧಾರಾವಾಹಿಯನ್ನು ತಪ್ಪದೆ ನೋಡುತ್ತಾರೆ. ಅಲ್ಲದೆ, ಲೈವ್ ನೋಡಲು ಆಗದಿದ್ದರೂ ವಿಎಚ್‍ಎಸ್ ತರಿಸಿಕೊಂಡು ನೋಡುತ್ತಾರೆ. ಅನ್ನಿ ಧಾರಾವಾಹಿ ಮೂಲಕ ತಮಿಳರ ಹೃದಯದಲ್ಲಿ ಸ್ಥಾನ ಪಡೆಯುತ್ತೇನೆ ಎನ್ನುವ ವಿಶ್ವಾಸ ತಮಗಿದೆ ಎಂಬುದರ ಬಗ್ಗೆ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮಾಳವಿಕಾ ಕನ್ನಡಿಗರ ಕ್ಷಮೆ ಕೇಳುತ್ತೇನೆ. ಫೇಸ್‍ಬುಕ್ ಹಾಕಿರುವ ಸ್ಟೇಟಸ್ ಡಿಲೀಟ್ ಮಾಡುತ್ತೇನೆ ಮತ್ತು ತಪ್ಪಾಯಿತು ಎಂದು ಹೇಳಿದ್ದಾರೆ. ಚಿತ್ರನಟಿ ಹಾಗೂ ಬಿಜೆಪಿ ವಕ್ತಾರರಾಗಿರುವ ಮಾಳವಿಕಾ ಅವಿನಾಶ್ , ಫೇಸ್‍ಬುಕ್‍ನಲ್ಲಿ ಈ ರೀತಿ ಸ್ಟೇಟಸ್ ಹಾಕಿರುವುದು ಎಷ್ಟು ಸರಿ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.

Comments are closed.