ರಾಷ್ಟ್ರೀಯ

ಆತ್ಮಹತ್ಯೆಗೆ ಶರಣಾದ ಎಐಐಎಂಎಸ್ ವೈದ್ಯೆ

Pinterest LinkedIn Tumblr

suicideನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ (ಏಮ್ಸ್) ನ 29 ವರ್ಷದ ವೈದ್ಯೆಯೊಬ್ಬರು ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ.
ಏಮ್ಸ್ ನ ತುರ್ತು ನಿಘಾ ಘಟಕದ ಅನಸ್ಥೆಷಿಯಾ ವಿಭಾಗದಲ್ಲಿ ರಿತು ಮಂಕೋಟಿಯಾ ಸೇವೆ ಸಲ್ಲಿಸುತ್ತಿದ್ದರು. ಅವರು ಪೂರ್ವ ದೆಹಲಿಯ ಮಧು ವಿಹಾರ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಯಾವುದೋ ಔಷಧವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ಮೇಲ್ನೋಟಕ್ಕೆ ಇದು ಕುಟುಂಬ ಕಲಹ ಎಂದು ಕಾಣಿಸುತ್ತದೆ”ಎಂದು ಉಪ ಪೊಲೀಸ್ ಕಮಿಷನರ್ ರಿಷಿ ಪಾಲ್ ಹೇಳಿದ್ದಾರೆ.
ಪೊಲೀಸರಿಗೆ ಶುಕ್ರವಾರ ಬೆಳೆಗ್ಗೆ ಇದರ ಮಾಹಿತಿ ದೊರೆಯಿತು ಎನ್ನುವ ಪಾಲ್ “ನಾವು ಸ್ಥಳಕ್ಕೆ ಹೋದಾಗ, ಬಾಗಿಲು ಒಡೆದು ಒಳಹೋದಮೇಲೆ ರಿತು ಮಂಕೋಟಿಯಾ ಶವ ಸಿಕ್ಕಿತು” ಎಂದಿದ್ದಾರೆ.
ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿಸಿರುವ ಪಾಲ್, ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ವೈದ್ಯೆ ತಮ್ಮ ಪತಿಯೊಂದಿಗೆ ಕಲಹದಲ್ಲಿದ್ದರು ಎಂದು ಸಂತ್ರಸ್ತೆಯ ಕುಟುಂಬ ಹೇಳಿರುವುದನ್ನಾಧರಿಸಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Comments are closed.