ಉಡುಪಿ: ಬಹುಕೋಟಿ ಉದ್ಯಮಿ ಉಡುಪಿಯ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ ಭಟ್ಟನನ್ನು ನ್ಯಾಯಾಲಯ ಎರಡು ದಿನಗಳ ಸಿಐಡಿ ಕಸ್ಟಡಿಗೆ ನೀಡಿದೆ.

ಗುರುವಾರ ಸಿಐಡಿ ಪೊಲೀಸರ ಕೋರಿಕೆ ಮೇರೆಗೆ ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದ್ದು, ಸಿಐಡಿ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಭಟ್ಟನನ್ನು ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ. ನಿರಂಜನ್ ತಂದೆ ಶ್ರೀನಿವಾಸ ಭಟ್, ಚಾಲಕ ರಾಘುವನ್ನು ಈಗಾಗಲೇ ಸಿಐಡಿ ಪೊಲೀಸರು ತನಿಖೆ ನಡೆಸಿದ್ದು ರಾಜೇಶ್ವರಿ, ನವನೀತನನ್ನು ಇನ್ನಷ್ಟೇ ತನಿಖೆಗೆ ಒಳಪಡಿಸಬೇಕಾಗಿದೆ.
ಇನ್ನು ಭಾಸ್ಕರ ಶೆಟ್ಟಿ ಅವರ ಮಗ ನವನೀತ್ ಶೆಟ್ಟಿ, ಶ್ರೀನಿವಾಸ ಭಟ್, ರಾಘು ಹಿರಿಯಡಕ ಸಬ್ ಜೈಲಿನಲ್ಲಿದ್ದುಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಮಂಗಳೂರು ಜೈಲಿನಲ್ಲಿದ್ದಾಳೆ.
Comments are closed.