ಅಂತರಾಷ್ಟ್ರೀಯ

ಆ್ಯಂಡ್ರಾಯಿಡ್‌ ಆ್ಯಪ್‌ ಬಳಸಿ ಸೈಕಲ್‌ ಓಡಿಸಿ!

Pinterest LinkedIn Tumblr

4ಸೈಕಲ್‌ ಅಂದರೆ ಎರಡು ಚಕ್ರ, ಪೆಡಲ್‌, ಚೈನು ಇಷ್ಟೇ ಅಂದುಕೊಂಡವರು ಹೆಚ್ಚು. ಆದರೆ, ಈಗಿನ ಜಮಾನಾದ ಸೈಕಲ್‌ಗ‌ಳು ಇನ್ನಿಲ್ಲದಷ್ಟು ಸುಧಾರಣೆಗೊಂಡಿವೆ. ಹಗುರ, ದೀರ್ಘ‌ ಬಾಳಿಕೆಯ ಸೈಕಲ್‌ಗ‌ಳು, ವೇಗದಲ್ಲೂ ಹುಬ್ಬೇರಿಸುವಂತೆ ಓಡುವ ಸೈಕಲ್‌ಗ‌ಳಿವೆ.

ಈ ಅತ್ಯಾಧುನಿಕ ಸೈಕಲ್‌ಗ‌ಳಿಗೊಂದು ಹೊಸ ಸೇರ್ಪಡೆ ಆ್ಯಂಡ್ರಾಯಿಡ್‌ ಸೈಕಲ್‌. ಆ್ಯಂಡ್ರಾಯಿಡ್‌ ಫೋನ್‌ಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಇದು ಹೊಸ ಮಾದರಿಯ ಸೈಕಲ್‌. ಮೊಬೈಲ್‌ ಆ್ಯಪ್‌ ಆಧಾರಿತವಾಗಿ ಈ ಸೈಕಲ್‌ ಕೂಡ ನಿರ್ವಹಿಸಬಹುದು. ಚೀನಾ ಮೂಲದ ಲೆಇಕೋ ಹೆಸರಿನ ಪ್ರಸಿದ್ಧ ತಂತ್ರಜ್ಞಾನ ಕಂಪನಿ ಈ ಸ್ಮಾರ್ಟ್‌ ಸೈಕಲ್‌ ಅನ್ನು ಆವಿಷ್ಕರಿಸಿವೆ ಇದಕ್ಕೆ ಸೂಪರ್‌ ಬೈಕ್‌ ಎಂದು ಹೆಸರಿಡಲಾಗಿದೆ. ಇದರಲ್ಲಿ ಸುರಕ್ಷತೆ ಸಂಗತಿಗಳು ಸೇರಿದಂತೆ ಹಲವು ಸೌಕರ್ಯಗಳಿವೆ ಸೈಕಲ್‌ ಲಾಕ್‌ ಓಪನ್‌ ಆಗಬೇಕಾದರೆ, ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌, ಬಲಬದಿಗೆ ತಿರುಗುವ ವೇಳೆ ತನ್ನಿಂದತಾನಾಗಿಯೇ ಉರಿಯುವ ಮಿಣುಕು ದೀಪಗಳು, ಸೈಕಲ್‌ ಪಾರ್ಕಿಂಗ್‌ ಸ್ಥಳದಲ್ಲಿ ಎಲ್ಲಿದೆ ಎಂದು ಗುರುತಿಸುವ ಸೌಲಭ್ಯ, ನ್ಯಾವಿಗೇಷನ್‌ ಸಿಸ್ಟಂ, ತನ್ನಿಂದ ತಾನಾಗಿಯೇ ರಾತ್ರಿ ವೇಳೆ ಹೊತ್ತಿಕೊಳ್ಳುವ ದೀಪದ ವ್ಯವಸ್ಥೆ, ಸೈಕಲ್‌ ಓಡಿಸುತ್ತಿರುವಾಗಲೇ ಕರೆ ಬಂದರೆ ಸ್ವೀಕರಿಸುವ ವ್ಯವಸ್ಥೆ ಇತ್ಯಾದಿಗಳಿವೆ.

ಸೈಕಲ್‌ ಹ್ಯಾಂಡಲ್‌ ಬಾರ್‌ನಲ್ಲಿ ಸ್ಮಾರ್ಟ್‌ ಡಿವೈಸ್‌ ಅನ್ನು ಅಳವಡಿಸಲಾಗಿದ್ದು, ಅದರ ಮೂಲಕ ಸೈಕಲ್‌ನ ಸಾಫ್ಟವೇರ್‌ ನಿಯಂತ್ರಣ ಮಾಡಬಹುದಾಗಿದೆ. ಕಳ್ಳತನ ಪ್ರಯತ್ನ ಮಾಡಿದರೆ, ದೊಡ್ಡದಾಗಿ ಅಲರಾಂ ಹೊಡೆವ ವ್ಯವಸ್ಥೆ, ಜೊತಗೆ ಸೈಕಲ್‌ ಮಾಲಿಕನ ಸ್ಮಾಟ್‌ಫೋನ್‌ಗೆ ಕರೆ ಹೋಗುವ ವ್ಯವಸ್ಥೆ ಇದೆ. ಕ್ಲೌಡ್ ಸಂಪರ್ಕ ಹೊಂದಿದ ಮೊಬೈಲ್‌ ಆ್ಯಪ್‌ ಇದರಲ್ಲಿದೆ

. ಲೆಇಕೋ ಇದನ್ನು ಮುಂದಿನ ತಲೆಮಾರಿನ ಸೈಕಲ್‌ ಎಂದು ಹೇಳಿದೆ. ಸದ್ಯ ಈ ಸೈಕಲನ್ನು ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವ ಇರಾದೆಯನ್ನೂ ಹೊಂದಿದೆ. ಆದರೆ ಬೆಲೆ ತಿಳಿದು ಬಂದಿಲ್ಲ.

-ಉದಯವಾಣಿ

Comments are closed.