ಕರ್ನಾಟಕ

ಅನೈತಿಕ ಸಂಬಂಧ ಮುಚ್ಚಿ ಹಾಕಲು ಮಗುವನ್ನು ಜೀವಂತ ಹೂಳಲು ಯತ್ನಿಸಿದ ಅಣ್ಣ-ತಂಗಿ ಅರೆಸ್ಟ್

Pinterest LinkedIn Tumblr

arreastಹೊಸಪೇಟೆ,ಸೆ.14-ತನ್ನ ಅನೈತಿಕ ಸಂಬಂಧವನ್ನು ಮುಚ್ಚಿ ಹಾಕಲು ನಿಷ್ಕರುಣಿ ತಾಯಿಯೊಬ್ಬಳು ಆರು ದಿನದ ಹೆಣ್ಣು ಮಗುವೊಂದನ್ನು ಜೀವಂತ ಹೂಳಿ ಹಾಕಲು ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಆದರೆ ಆಟೋ ಚಾಲಕ ರಮೇಶ್ ಎಂಬುವರು ಸಮಯ ಪ್ರಜ್ಞೆಯಿಂದ ಹೆಣ್ಣುಮಗು ಮೃತುವಿನ ದವಡೆಯಿಂದ ಪಾರಾಗಿದ್ದು , ಸದ್ಯ ಈಗ ಬಳ್ಳಾರಿ ಬಾಲಮಂದಿರದಲ್ಲಿ ಸುರಕ್ಷಿತವಾಗಿದೆ. ಮಗುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಗುವನ್ನು ಜೀವಂತ ಹೂಳು ಯತ್ನಿಸಿದ ತಾಯಿ ಮಲ್ಲಮ್ಮ ಹಾಗೂ ಆಕೆಯ ಅಣ್ಣ ಶಿವಪ್ಪನನ್ನು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯೊಬ್ಬನ ಜೊತೆ ತನಿಗಿದ್ದ ಅಕ್ರಮ ಸಂಬಂಧದಿಂದಾಗಿ ಈ ಮಗು ಜನಿಸಿತು. ಮಗು ಬದುಕಿದ್ದರೆ ತನ್ನ ಅನೈತಿಕ ಸಂಬಂಧ ಬೆಳಕಿಗೆ ಬರುತ್ತದೆ ಎಂದು ಅದನ್ನು ಮರೆಮಾಚಲು ಮಲ್ಲಮ್ಮ ಮಗುವನ್ನು ಜೀವಂತ ಹೂಳುವ ಕೃತ್ಯಕ್ಕೆ ಮುಂದಾಗಿದ್ದಾಳೆ. ಮಲ್ಲಮ್ಮನಿಗೆ ಆಕೆಯ ಅಣ್ಣ ಸಾಥ್ ನೀಡಿದ್ದಾನೆ. ಇವರಿಬ್ಬರು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದವರು ಎಂದು ತಿಳಿದುಬಂದಿದೆ. ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.