ಬೆಂಗಳೂರು, ಸೆ ೧೪- ಕಾವೇರಿ ಗಲಾಟೆ ಸಂದರ್ಭದಲ್ಲಿ ನನ್ನ ಪುತ್ರ ಹಾಗೂ ಕುಟುಂಬದವರನ್ನು ಅನಗತ್ಯವಾಗಿ ಪೋಲಿಸರು ಬಂಧಿಸಿದ್ದು, ಇದರ ಹಿಂದೆ ಸಂಸದ ಡಿ,ಕೆ,ಸುರೇಶ್ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಶಶಿಕಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕಣ್ಣೀರಿಟ್ಟು ದೂರು ಸಲ್ಲಿಸಿದ ಪ್ರಸಂಗ ನಡೆದಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೊಡಿಕೊಂಡ ಶಶಿಕಲಾ ಅವರು ಕಾವೇರಿ ಗಲಾಟೆ ವೇಳೆ ನನ್ನ ಕುಟುಂಬದ ಐವರನ್ನು ಬಂಧಿಸಿ ಕರೆದ್ಯೊಯ್ದಿದ್ದಾರೆ, ಅವರನ್ನು ಕೂಡಲೇ ಬಿಡುಗಡೆ ಮಾಡಿಸಿಕೊಡಬೇಕೆಂದು ಕಣ್ಣೀರಿಟ್ಟು ಮನವಿ ಮಾಡಿದರು.
ಮೊನ್ನೆ ದಿನ ನಗರದಲ್ಲಿ ನಡೆದ ಕಾವೇರಿ ಗಲಾಟೆ ವೇಳೆ ನಮ್ಮದೇ ವಾಟರ್ ಸರ್ವಿಸ್ನಲ್ಲಿ ನೀರಿನ ಟ್ಯಾಂಕರ್ಗೆ ನೀರು ತುಂಬಿಸುತ್ತಿದ್ದಾಗ ವಿನಾಕಾರಣ ಯಾವುದೇ ತಪ್ಪು ಮಾಡದ ನನ್ನ ಪುತ್ರ ಹಾಗೂ ಚಾಲಕರು ಸೇರಿದಂತೆ ಐವರನ್ನು ರಾಜರಾಜೇರಿಶ್ವರಿ ನಗರದ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಠಾಣೆಗೆ ಹೋಗಿ ವಿಚಾರಿಸಿದರೆ, ನಮ್ಮ ಮಾತಿಗೆ ಕಿವಿಗೊಡದೆ ಸಂಸದ ಡಿ.ಕೆ.ಸುರೇಶ್ ಅವರಿಂದ ದೂರವಾಣಿ ಕರೆ ಮಾಡಿಸಿ ಎಂದು ಅಲ್ಲಿನ ಪೋಲಿಸ್ ಅಧಿಕರಿಯೊಬ್ಬರು ಹೇಳುತ್ತಾರೆ ಎಂದು ಅವರು ದುಃಖ ತೊಡಿಕೊಂಡರು.
ಇದೇ ವೇಳೆ ನನ್ನ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಸುರೇಶ್ ಅವರು ಆರ್. ಆರ್ ನಗರದ ಭೂವಿವಾದ ಸಂಬಂಧ ಕಿರುಕುಳ ನೀಡುತ್ತಿದ್ದಾರೆ, ಇದರಿಂದ ನನ್ನ ಕುಟುಂಬ ನೋವು ಅನುಭವಿಸುವಂತಾಗಿದೆ ಎಂದು ಸಿಎಂ ಬಳಿ ನಗರದ ಹೊಸಕೆರೆಹಳ್ಳಿನ ಕಾಂಗ್ರೆಸ್ ಕಾರ್ಯಕರ್ತೆ ಶಶಿಕಲಾ ಅವರು ದೂರು ಸಲ್ಲಿಸಿದರು. ಹಾಗೂ ಕೂಡಲೇ ಬಂಧಿಸಿರುವ ನನ್ನ ಕುಟುಂಬದವರನ್ನು ಬಿಡುಗಡೆ ಮಾಡಿಸಬೇಕೆಂದು ಮನವಿ ಮಾಡಿದರು.
Comments are closed.