
ಬೆಂಗಳೂರು: ಹಿಂಸಾರೂಪಕ್ಕೆ ತಿರುಗಿದ್ದ ಕಾವೇರಿ ಪ್ರತಿಭಟನೆಯಲ್ಲಿ ಸೋಮವಾರ ನಡೆದ ಗೋಲಿಬಾರ್‌ವೇಳೆ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದ ಕುಮಾರ್‌ಚಿಕಿತ್ಸೆ ಫಲಿಸದೆ ಮಂಗಳವಾರ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿದೆ.
ಪ್ರತಿಭಟನೆ ತೀವ್ರಸ್ವರೂಪ ಪಡೆದ ವೇಳೆ ಭದ್ರತಾ ಸಿಬ್ಬಂದಿ ಗೋಲಿಬಾರ್‌ನಡೆಸಲು ಮುಂದಾದಾಗ, ಓಡಿ ಹೋಗುವ ಸಮಯದಲ್ಲಿ ಕುಮಾರ್‌ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ತಕ್ಷಣ ಸಮೀಪದ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದು, ಬೆನ್ನು ಮೂಳೆ ಹಾಗೂ ಕಾಲು ಮುರಿದಿತ್ತು.
ಬಾರ್‌ಬೆಂಡಿಂಗ್‌ಕೆಲಸ ಮಾಡುತ್ತಿದ್ದ ಕುಮಾರ್, ಮಾಗಡಿ ತಾಲ್ಲೂಕಿನ ಬ್ಯಾಡರಹಳ್ಳಿ ಕೆಂಪೇಗೌಡ ನಗರದ ನಿವಾಸಿ.
Comments are closed.