https://youtu.be/u6N2ha-rpyw
ರತ್ನಗಿರಿ : ಮಹಾರಾಷ್ಟ್ರ ಕರಾವಳಿಯ ಜೀತಾಪುರ್ಅಣುಸ್ಥಾವರದ ಸಮೀಪ ಕಡಲ ಕಿನಾರೆಯಲ್ಲಿ ಸಾವಿನಂಚಿಗೆ ಸಿಲುಕಿದ್ದ ಭಾರೀ ಗಾತ್ರದ ದೈತ್ಯ ತಿಮಿಂಗಲಕ್ಕೆ ಸೋಮವಾರ ಮರುಜೀವ ನೀಡಲಾಗಿದೆ.
ಆಹಾರ ಅರಸಿ ಕಿನಾರೆಯತ್ತ ಬಂದ ನೀಲಿ ತಿಮಿಂಗಿಲ ಬರೊಬ್ಬರಿ 47 ಅಡಿಗಳಷ್ಟು ಉದ್ದವಾಗಿತ್ತು,20 ಟನ್ತೂಕ ದ್ದಾಗಿತ್ತು ಎಂದು ಅಂದಾಜಿಸಲಾಗಿದೆ.
ಸಾಗರ ಸಂರಕ್ಷಣಾ ದಳದ ಅಧಿಕಾರಿಗಳು , ಮೀನುಗಾರರು ಸೇರಿದಂತೆ 40ಕ್ಕೂ ಹೆಚ್ಚು ಜನರು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದಡಕ್ಕೆ ಬಂದು ಸಾವಿನಂಚಿಗೆ ಸಿಲುಕಿದ್ದ ತಿಮಿಂಗಿಲವನ್ನು ಮತ್ತೆ ಆಳ ಸಮುದ್ರಕ್ಕೆ ಬಿಡುವಲ್ಲಿ ಯಶಸ್ವಿಯಾದರು.
ಕಳೆದ ಜನವರಿಯಲ್ಲಿ ರತ್ನಗಿರಿ ಕಡಲ ತೀರದಲ್ಲಿ 40 ಅಡಿ ಉದ್ದದ ತಿಮಿಂಗಲವನ್ನು ಇದೇ ರೀತಿ ರಕ್ಷಣೆ ಮಾಡಲಾಗಿತ್ತು.
Comments are closed.