ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ.ಪೆರಾರಿವಲನ್ ಮೇಲೆ ಸಹ ಕೈದಿಯೊಬ್ಬ ದಾಳಿ ಮಾಡಿದ್ದಾನೆ.
ಜೀವಾವಧಿ ಶಿಕ್ಷೆಗೆ ಒಳಗಾಗಿರುವ ರಾಜೇಶ್ ಎಂಬಾತ ವೆಲ್ಲೋರ್ ಕೇಂದ್ರ ಜೈಲಿನಲ್ಲಿ ಪೆರಾರಿವಲನ್ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ ಮಾಡಿದ್ದಾನೆ. ಗಾಯಗೊಂಡ ಪೆರಾರಿವಲನ್‌ನನ್ನು ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪೆರಾರಿವಲನ್ ಕೈಗೆ ಗಂಭೀರ ಏಟು ಬಿದ್ದಿದ್ದು, ವೈದ್ಯರು ಆರು ಹೊಲಿಗೆ ಹಾಕಿದ್ದಾರೆ. ಪೆರಾರಿವಲನ್ ಪರ ವಕೀಲ ಶಿವಕುಮಾರ್ ದಾಳಿಯನ್ನು ಖಚಿತಪಡಿಸಿದ್ದಾರೆ. ಉನ್ನತ ಅಧಿಕಾರಿಗಳು ಜೈಲಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣ ಸಂಬಂಧ ಕಳೆದ 25 ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿರುವ ಪೆರಾರಿವಲನ್ ಸೇರಿ 6 ಜನರ ಬಿಡುಗಡೆಗೆ ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ತಮಿಳುನಾಡಿನ ಡಿಜಿ ಆದೇಶಿಸಿದ್ದಾರೆ.
Comments are closed.