ಅಂತರಾಷ್ಟ್ರೀಯ

ಸ್ಯಾಮ್‌ಸಂಗ್‌ನಿಂದ 4ಜಿ ಸ್ಮಾರ್ಟ್ ಫೋನ್ ಜೆಡ್2 ಬಿಡುಗಡೆ

Pinterest LinkedIn Tumblr

tizenಸ್ಯಾಮ್‌ಸಂಗ್ ಇಂಡಿಯಾ ಟೈಝೆನ್ ತಾಂತ್ರಿಕತೆಯ ಮೊದಲ 4ಜಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ 2ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಟೈಝೆನ್ ತಂತ್ರಜ್ಞಾನ ಸ್ಯಾಮ್‌ಸಂಗ್ ಝೆಡ್2 ಸ್ಮಾರ್ಟ್‌ಫೋನ್‌ನ್ನು ಫೀಚರ್ ಫೋನ್ ಆಗಿ ಪರಿವರ್ತಿಸುವ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ. ಜೆಡ್1 ಮತ್ತು ಜೆಡ್3 ಯಶಸ್ಸಿನಿಂದ ಉತ್ತೇಜಿತರಾಗಿ ಸ್ಮಾರ್ಟ್‌ಫೋನ್‌ನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಟೈಝೆನ್ ಫ್ಲ್ಯಾಟ್‌ಫಾರಂ ಕಲ್ಪಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಕೆಯನ್ನು ವಿನೋದ, ಸ್ಮಾರ್ಟ್ ಮತ್ತು ಸರಳವಾಗಿಸಲಿದೆ. ಭಾರತೀಯ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಜೆಡ್2ನ್ನು ವಿನ್ಯಾಸಗೊಳಿಸಲಾಗಿದೆ. ಶಕ್ತಿಶಾಲಿ ಸ್ಪೆಸಿಫಿಕೇಶನ್‌ಗಳು, ಫ್ರೀಲೋಡ್ ಮಾಡಲಾದ ಅಗತ್ಯ ಆಪ್‌ಗಳು ಮತ್ತು ಸ್ಯಾಮ್‌ಸಂಗ್‌ನ ಅಲ್ಟ್ರಾ ಡೇಟಾ ಸೇವಿಂಗ್ ಮೂಡ್, ಎಸ್ ಬೈಕ್‌ನಂತಹ ಜನಪ್ರಿಯ ಮೇಕ್ ಫಾರ್ ಇಂಡಿಯ ಫೀಚರ್‌ಗಳು, ಮನಿ ಟ್ರಾನ್ಸ್‌ಫರ್‌ನ ಹೊಸ ವಿಧಾನಗಳು ಸ್ಮಾರ್ಟ್‌ಫೋನ್ ಬಳಕೆಯನ್ನು ಮತ್ತಷ್ಟು ಅನಿವಾರ್ಯವಾಗಿಸಲಿವೆ.

ಬೆಲೆ ಮತ್ತು ಲಭ್ಯತೆ ಬೆಲೆ:
ಸ್ಯಾಮ್‌ಸಂಗ್ ಜೆಡ್2 ಬೆಲೆ ಕೇವಲ 4,590 ರೂಪಾಯಿ ಮತ್ತು ಭಾರತದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಆಕರ್ಷಕ ಗೋಲ್ಡ್ ಬ್ಲ್ಯಾಕ್ ಮತ್ತು ವೈನ್‌ರೆಡ್ ಬಣ್ಣಗಳಲ್ಲಿ ದೊರೆಯಲಿದೆ. ಆನ್‌ಲೈನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ.

Comments are closed.