
ಮಂಗಳೂರು: ಹಿಂದೂ ಯುವ ಸೇನೆ ಅಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ 24ನೇ ವರ್ಷದ ಮಂಗಳೂರು ಗಣೇಶೋತ್ಸವ ರವಿವಾರ ಸಂಭ್ರಮದ ತೆರೆ ಕಂಡಿತ್ತು.
ಕಳೆದ ಏಳು ದಿನಗಳ ಕಾಲ ಕೇಂದ್ರ ಮೈದಾನದಲ್ಲಿ ಹಾಕಲಾದ ಭವ್ಯ ಮಟಪದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ಭವ್ಯ ಶೋಭಾಯಾತ್ರೆ ರವಿವಾರ ನಡೆಯಿತು.

ಬ್ಯಾಂಡು ವಾದನ, ಚೆಂಡೆ, ಭಜನೆ, ಕಲ್ಲಡ್ಕ ಬೊಂಬೆ ಕುಣಿತ, ಹುಲಿವೇಷ ಹಾಗೂ ಹಲವಾರು ಸ್ಥಬ್ದ ಚಿತ್ರ (ಟ್ಯಾಬ್ಲೋ) ಗಳ ಸಹಿತಾ ರವಿವಾರ ಸಂಜೆ ಕೇಂದ್ರ ಮೈದಾನದಿಂದ ಹೊರಟ ಶ್ರೀ ಮಹಾಗಣಪತಿ ದೇವರ ಭವ್ಯ ಮೆರವಣಿಗೆಯು ಟವರ್ ಕ್ಲಾಕ್, ಹಂಪನ್ ಕಟ್ಟೆ ಸ್ಗಿಗ್ನಲ್, ಕೆ.ಎಸ್.ರಾವ್ ರಸ್ತೆ, ನವ ಭಾರತ ಸರ್ಕಲ್, ಡೊಂಗರೆಕೇರಿ, ನ್ಯೂಚಿತ್ರ ಟಾಕೀಸ್, ರಥಭೀದಿ ಮೂಲಕ ಸಾಗಿ ಮಾಹಾಮ್ಮಾಯಿ ದೇವಸ್ಥಾನದ ಕುಡ್ತೇರಿ ಕೆರೆಯಲ್ಲಿ ಇಂದು ಮುಂಜಾನೆ ವಿಸರ್ಜನೆಗೊಂಡಿತ್ತು.
Comments are closed.