ಕ್ಯಾನನ್ಸ್ ಬರ್ಗ್: ಕೈಯಲ್ಲಿ ಬಾಣ ಹಿಡಿದು ದೂರದಲ್ಲಿರುವ ಬಲೂನ್ನನ್ನ ಒಡೆಯೋದೆ ಕಷ್ಟಕರ. ಅಂತಹದ್ರಲ್ಲಿ ಪುಟ್ಟ ಪೋರಿಯೊಬ್ಬಳು ತನ್ನ ಕಾಲಿನಲ್ಲಿ ಬಾಣದಿಂದ ಬಲೂನ್ ಒಡೆಯುತ್ತಾಳೆ.
ಹೌದು. ಪೆನಿಸಿಲ್ವೇನಿಯಾ ಕ್ಯಾನನ್ಸ್ಬರ್ಗ್ ಪೋರಿಯೊಬ್ಬಳು ತನ್ನ ಕಾಲಿನಲ್ಲಿ ಬಿಲ್ಲು ಹಿಡಿದು ಬಾಣದಿಂದ ದೂರದಲ್ಲಿರುವ ಬಲೂನ್ ಒಡಿದಿದ್ದಾಳೆ. ಅಂದ್ರೆ ನಂಬ್ಲೇಬೇಕು. ಈ ಮೂಲಕ ಬೆಲ್ಲಾ ಗ್ಯಾಂಟ್ ಎನ್ನುವ ಈ ಪೋರಿ ಈಗ ಬೊಬೆಲ್ಲಾ ಎಂದೇ ಫೇಮಸ್ ಆಗಿದ್ದಾಳೆ.
ಬೆಲ್ಲಾ ಬಿಲ್ಲುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದು, ತನ್ನ ಕಾಲಿನಲ್ಲಿ ದೂರದಲ್ಲಿ ಫಲಕವೊಂದಕ್ಕೆ ಅಂಟಿಸಿದ್ದ ಬಲೂನ್ಗಳನ್ನ ಒಂದೊಂದಾಗಿ ಒಡೆದಿದ್ದಾಳೆ. ಒಮ್ಮೆ ಬಲೂನ್ ಒಡೆದಿಲ್ಲವೆಂದು ಸಾಕಪ್ಪ ಎನ್ನದ ಬೆಲ್ಲಾ ಎಲ್ಲಾ ಬಲೂನ್ಗಳನ್ನ ಕಾಲಿನಲ್ಲೇ ಬಾಣ ಬಿಟ್ಟು ಬಲೂನ್ ಒಡೆದಿದ್ದಾಳೆ.
Comments are closed.