
ಚಿತ್ರದುರ್ಗ: ಕರ್ನಾಟಕ, ತಮಿಳುನಾಡು ಭಾರತ ಪಾಕಿಸ್ತಾನವೇ? ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದು, ಕರ್ನಾಟಕ, ತಮಿಳುನಾಡು ಭಾರತದ ಸ್ವರಾಜ್ಯಗಳು. ಹಾಗಾಗಿ ಹೊಂದಿಕೊಂಡು ಬಾಳಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿರುವವರು ರೈತರೇ, ಅಲ್ಲಿರುವವರು ರೈತರೇ. ಕಾವೇರಿ ಸಮಸ್ಯೆ ಈ ಹಿಂದಿನ ಸರ್ಕಾರಗಳು ಇದ್ದಾಗಲೂ ಇತ್ತು. ಆದರೆ ಈಗ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ತಜ್ಞರ ತಂಡ ಕಳುಹಿಸಲು ಸೂಚಿಸಿದೆ. ಇನ್ನು ನಾಲ್ಕೈದು ದಿನಗಳಲ್ಲಿ ತಜ್ಞರ ತಂಡ ಆಗಮಿಸಲಿದೆ. ಆಗ ನಾವು ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ. ಈ ವಿವಾದದ ಬಗ್ಗೆ ಪ್ರಧಾನಿಯವರೇ ಮಧ್ಯಪ್ರವೇಶಿಸಿ ಬಗೆಹರಿಸಬೇಕಾಗಿದೆ ಎಂದು ಕಾಗೋಡು ಹೇಳಿದರು.
-ಉದಯವಾಣಿ
Comments are closed.