ಕೈಮಗ್ಗದ ಹತ್ತಿ ಬಟ್ಟೆಯಿಂದ ತಯಾರಿಸುವ ದಿರಿಸುಗಳು, ಶಿವಮೊಗ್ಗದ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸುವ ಟೆರಾಕೋಟಾ ಆಭರಣ, ಬೀದರ್ ಜಿಲ್ಲೆಯ ಕರಕುಶಲ ಕೆತ್ತನೆ, ಚನ್ನಪಟ್ಟಣದ ಗೊಂಬೆಗಳು, ಮೈಸೂರಿನ ಮಂಡಿ ಮೊಹಲ್ಲಾ ಪ್ರದೇಶದಗಲ್ಲಿಗಳಲ್ಲಿ ತಯಾರಾಗುವ ಬೀಟೆ, ಶ್ರೀಗಂಧದಮರದ ತುಂಡುಗಳ ಕುಸುರಿ ಕೆತ್ತನೆ ಇವೆಲ್ಲವೂ ಅಪರೂಪದ ವಸ್ತುಗಳೇ.
ನೀವು ಈ ವಸ್ತುಗಳೆಲ್ಲಾ ಬೇಕಾದರೆ ಒಂದೋ ಈ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹೋಗಬೇಕಿತ್ತು. ಅಥವಾ ಆಯಾಯ ಪ್ರದೇಶಗಳಿಗೆ ಹೋಗಿ ಆ ವಸ್ತುಗಳನ್ನು ಖರೀದಿಸಬೇಕಿತ್ತು. ಆದರೆ ಈಗ ನೀವು ಈ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಈ ವಸ್ತುಗಳನ್ನು ನಿಮಗೆ ಬೇಕಾದರೆ ತಕ್ಷಣ www.totalkarnataka.comಗೆ ಭೇಟಿ ನೀಡಿ.
ಏನಿದು ಟೋಟಲ್ ಕರ್ನಾಟಕ?
ಕನ್ನಡದ ಸ್ಟಾರ್ಟಪ್ ಕಂಪನಿಗಳಿಗೆ ತರಬೇತುದಾರರಾಗಿರುವ ಚಂದ್ರಶೇಖರ ಕಾಕಾಲ್ ಮತ್ತು ಟೋಟಲ್ ಕನ್ನಡದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಲಕ್ಷಿ$¾àಕಾಂತ್ ಅವರು ಈ ಟೋಟಲ್ ಕರ್ನಾಟಕವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಸಣ್ಣ, ಮಧ್ಯ ಮತ್ತು ಗ್ರಾಮೀಣ ಪ್ರದೇಶದ ಉದ್ದಿಮೆಗಳನ್ನು ಅಂತರ್ಜಾಲ ಮಾರುಕಟ್ಟೆಗೆ ಪರಿಚಯಿಸುವುದು ಇವರ ಉದ್ದೇಶ. ಎಲ್ಲವೂ ಈಗ ಅಂತರ್ಜಾಲದಲ್ಲಿ ಲಭ್ಯವಿದೆ. ನಮ್ಮ ಕನ್ನಡ ಸೊಗಡಿನ ವಸ್ತುಗಳೂ ಅಂತರ್ಜಾಲದಲ್ಲಿ ಸಿಗುವಂತೆ ಮಾಡುತ್ತಿದೆ ಅನ್ನೋದು ಈ ಟೋಟಲ್ ಕರ್ನಾಟಕ ತಾಣದ ಹೆಗ್ಗಳಿಕೆ.
ಏನು ಸಿಗುತ್ತದೆ?
ಉತ್ತರ ಕರ್ನಾಟಕದ ಆಹಾರ ಪದಾರ್ಥಗಳನ್ನೂ ನೀವು ಇಲ್ಲಿಂದ ಖರೀದಿಸಬಹುದು. ಬಿದಿರು ಕಲೆ, ಚನ್ನಪಟ್ಟಣ ಬೊಂಬೆಗಳು, ಕಾಕಾಲ್ ಮತ್ತಿತರ ಉಪ್ಪಿನಕಾಯಿಗಳು, ಕನ್ನಡ ಟೀಷರ್ಟುಗಳು, ಮರದ ಕೆತ್ತನೆಗಳು ಹೀಗೆ ಕನ್ನಡ ಸೊಗಡಿನ ವಸ್ತುಗಳೆಲ್ಲಾ ಇಲ್ಲಿ ಸಿಗುತ್ತವೆ. ಅದರ ಜೊತೆ ಕನ್ನಡ ಸಿನಿಮಾ ಸಿಡಿಗಳು, ಪುಸ್ತಕಗಳು ಎಲ್ಲವೂ ಇಲ್ಲಿ ಲಭ್ಯ. ವಿಶೇಷ ಎಂದರೆ ಇಲ್ಲಿ ಗ್ರಾಮೀಣ ಪ್ರದೇಶದ ಉದ್ದಿಮೆಗಳು ಮತ್ತು ಸ್ತ್ರೀಯರ ಸ್ವಸಹಾಯ ಮಂಡಳಿಗಳು ತಯಾರಿಸಿದ ವಸ್ತುಗಳನ್ನು ಪಡೆಯಬಹುದು. ಸಣ್ಣ ದೇಸಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವವರು ಟೋಟಲ್ ಕರ್ನಾಟಕವನ್ನು ಬೆಂಬಲಿಸಬಹುದು. ಆ ಮೂಲಕ ಹಳ್ಳಿಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಬಹುದು.
ಎಲ್ಲಿ- ನಂ.9, 1ನೇಮುಖ್ಯರಸ್ತೆ, 1ನೇಅಡ್ಡರಸ್ತೆ, ಸಂತೃಪ್ತಿನಗರ, ಕೊತ್ತನೂರು ದಿನ್ನೆ ಮುಖ್ಯರಸ್ತೆ (ಕಾಕಾಲ್ ಕೈರುಚಿ ಹೋಟೆಲ್ ಹಿಂಭಾಗ), ಜೆಪಿ ನಗರ 7ನೇಹಂತ
ದೂ- 080 49521123
ವೆಬ್‌ಸೈಟ್- www.totalkarnataka.com
ಫೇಸ್‌ಬುಕ್- https://www.facebook.com/totalkarnatakaonlined
-ಉದಯವಾಣಿ
Comments are closed.