ಬಿಲ್ ಗೇಟ್ಸ್‌ರನ್ನ ಹಿಂದಿಟ್ಟು ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಸ್ಪ್ಯಾನಿಷ್ ಉದ್ಯಮಿ ಅಮ್ಯಾನ್ಷಿಯೋ ಅರ್ಟೆಗಾ ಹೊರಹೊಮ್ಮಿದ್ದಾರೆ.
ಝರಾ ಸಂಸ್ಥೆಯ ಸ್ಥಾಪಕರಾದ ಅಮ್ಯಾನ್ಷಿಯೋ ಅರ್ಟೆಗಾ ಷೇರುಗಳ ಒಟ್ಟು ಮೌಲ್ಯ ₹5.32 ಲಕ್ಷ ಕೋಟಿ (79.5 ಬಿಲಿಯನ್ ಡಾಲರ್) ತಲುಪಿದ್ದು, ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. 80 ವರ್ಷದ ಅರ್ಟೆಗಾ ಅವರು ಈ ಹಿಂದೆಯೇ ಯುರೋಪ್‌ನ ಅತಿ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದಿದ್ದರು.
ಬುಧವಾರ ಷೇರು ಪೇಟೆಯಲ್ಲಿ ಅರ್ಟೆಗಾ ಅವರ ಷೇರುಗಳಲ್ಲಿ ಶೇ.2.5ರಷ್ಟು ಏರಿಕೆ ಕಾಣುವ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಮೈಕ್ರೋ ಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಒಟ್ಟು ಷೇರು ಮೌಲ್ಯ ₹5.25 ಲಕ್ಷ ಕೋಟಿ (79.5 ಬಿಲಿಯನ್ ಡಾಲರ್).
Comments are closed.