ಪಾಟ್ನಾ: ಪ್ರೀತಿಯ ಬಲೆಗೆ ಬಿದ್ದ ಮಹಿಳೆಯೋರ್ವಳು ತನಗೆ ಜನಿಸಿದ ಇಬ್ಬರು ಹೆಣ್ಣುಮಕ್ಕಳನ್ನು ನದಿಗೆ ಎಸೆದು ಪ್ರೇಮಿಯೊಂದಿಗೆ ಬೈಕ್ನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.
ಬಿಹಾರದ ಬೆಗುಸಾರೈ ಜಿಲ್ಲೆ ಚಾಂದ್ಪುರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ 4 ಹಾಗೂ 2 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತವರು ಮನೆಯಿಂದ ಬಂದಿದ್ದಳು.
ಆದ್ರೆ ಬೂದಿ ಗಂಡಕ್ ನದಿಯ ಬಳಿ ಬಂದು ಹೆಣ್ಣುಮಕ್ಕಳನ್ನು ನದಿಗೆ ಎಸೆದು ನಂತರ ಪ್ರೇಮಿಯೊಂದಿಗೆ ಬೈಕ್ನಲ್ಲಿ ಹೋಗಿದ್ದಾಳೆ ಎನ್ನಲಾಗಿದೆ.
ಹೆಣ್ಣು ಮಕ್ಕಳನ್ನು ನದಿಗೆ ಎಸೆಯುತ್ತಿದ್ದಂತೆ ಸ್ಥಳದಲ್ಲಿದ್ದ ಮೀನುಗಾರರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ನೋಡಿ ರಕ್ಷಣೆ ಮಾಡಿ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ಅಜ್ಜ ಮನೋಜ್ ಶರ್ಮಾ ಪರಾರಿಯಾಗಿರುವ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

Comments are closed.