
ಮಂಡ್ಯ: ಕಾವೇರಿ ನೀರಿನ ವಿವಾದ ಕುರಿತಂತೆ ಮೇಲುಸ್ತುವಾರಿ ಸಮಿತಿ ಇದ್ದರೂ ಸುಪ್ರೀಂಕೋರ್ಟ್ ಆದೇಶ ನೀಡಿರುವುದನ್ನು ಪ್ರಶ್ನಿಸಿ ಎಂ.ಡಿ. ರಾಜಣ್ಣ ಎಂಬುವವರು ಮಂಡ್ಯದ ಜೆಎಂಎಫ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಟಿ.ಎಸ್. ಠಾಕೂರ, ದೀಪಕ್ ಮಿಶ್ರಾ, ಉದಯ ಉಮೇಶ್ ಲಲಿತ್, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವರ ಎಂ.ಬಿ. ಪಾಟೀಲ್, ತಮಿಳುನಾಡು ಹಾಗೂ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ದೂರು ನೀಡಿದ್ದಾರೆ.
ಅಂತರ ರಾಜ್ಯ ಜಲ ವಿವಾದದಲ್ಲಿ ಆದೇಶ ನೀಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲದಿದ್ದರೂ ಆದೇಶ ನೀಡಲಾಗಿದೆ. ತಮಿಳುನಾಡು ಸರ್ಕಾರವು ನ್ಯಾಯಾಲಯದ ಮೊರೆ ಹೋಗಿರುವುದು ತಪ್ಪು. ಆದ್ದರಿಂದ ಈ ಬಗ್ಗೆ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದ್ದಾರೆ. ವಿಚಾರಣೆಯನ್ನು ಸೆ.14ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ.
Comments are closed.