ಬೆಂಗಳೂರು,ಸೆ.೪-ಹೆಚ್‌ಎಎಲ್ ೩ನೇ ಹಂತದ ೧೦ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ೭ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೬ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಬೊಮ್ಮನಹಳ್ಳಿಯ ಜಯಂತ್ ಶೆಟ್ಟಿ (೨೭) ಉತ್ತರಾಖಂಡ್‌ನ ದೀರಜ್ ಶರ್ಮ (೨೪) ಜಯನಗರ ೧ನೇ ಬ್ಲಾಕ್‌ನ ಜಾಫರ್‌ಚಾಂದೆವಾಲಾ(೩೮) ಚೆನ್ನೈನ ರಾಜೇಶ್‌ಕುಮಾರ್(೨೭ ) ನಮಕ್ಕಲ್‌ನ ಅರುಣ್‌ಎನ್(೩೩) ಸೋಮೇಶ್ವರನಗರದ ಮುಜಾಮಿಲ್(೩೯)ಅಹಮದಾಬಾದ್‌ನ ವಾಸು(೫೦)ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ೯೪ ಸಾವಿರ ೭೦೦ ರೂ ನಗದು ೬ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಕೋಲ್ಕತ್ತಾ ಮೂಲದ ೬ ಮಂದಿ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪಿತರುಗಳು ಬೇರೆ ರಾಜ್ಯಗಳಿಂದ ಉದ್ಯೋಗದ ನೆಪದಲ್ಲಿ ಯುವತಿಯರನ್ನು ಕರೆತಂದು ಬಂದು ಮಸಾಜ್ ಪಾರ್ಲರ್‌ನಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದ್ದು ಆರೋಪಿಗಳ ವಿರುದ್ದ ಜಗಜೀವನರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟ್ರಾಕ್ಟರ್ ಸ್ಕೂಟರ್‌ಗೆ ಡಿಕ್ಕಿ ಗಾರೆ ಮೇಸ್ತ್ರಿ ಸಾವು
ಬೆಂಗಳೂರು,ಸೆ.೪-ಟ್ರಾಕ್ಟರ್ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಗಾರೆ ಮೇಸ್ತ್ರಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಬಾಗಲೂರು ಕಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ.
ಬಾಗಲೂರಿನ ಶಂಕರ್ (೩೪)ಮೃತಪಟ್ಟವರು,ಚಾಗಲೋಟಿಯಲ್ಲಿ ಕೆಲಸ ಮುಗಿಸಿಕೊಂಡು ನಿನ್ನೆ ಮಧ್ಯಾಹ್ನ ೩.೪೫ರ ವೇಳೆ ಶಂಕರ್ ಅವರು ಬಾಗಲೂರಿನ ಮನೆಗೆ ಹೊಂಡಾ ಡಿಯೋ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು.
ಮಾರ್ಗಮಧ್ಯೆ ಬಾಗಲೂರು ಕಣ್ಣೂರು ಮುಖ್ಯರಸ್ತೆಯ ಚಾಗಲೋಟಿ ಬಸ್‌ನಿಲ್ದಾಣದ ಬಳಿ ಟ್ರಾಕ್ಟರ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಶಂಕರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಚಿಕ್ಕಜಾಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಟ್ರಾಕ್ಟರ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರೇಣುಕಾ ಅವರು ತಿಳಿಸಿದ್ದಾರೆ.
ಲಾರಿ ಹರಿದು ಬಿಎಂಟಿಸಿ ಕಂಡಕ್ಟರ್ ಸಾವು
ಬಸ್ ಹಿಂತೆಗೆದುಕೊಳ್ಳಲು ಸೂಚನೆ ನೀಡುತ್ತಿದ್ದಾಗ ದುರ್ಘಟನೆ
ಬೆಂಗಳೂರು,ಸೆ.೪-ಬಸ್ ಹಿಂತೆಗೆದುಕೊಳ್ಳಲು ಚಾಲಕನಿಗೆ ಸೂಚನೆ ನೀಡುತ್ತಿದ್ದ ಬಿಎಂಟಿಸಿ ಕಂಡಕ್ಟರ್ ಶಿವಲಿಂಗಯ್ಯ ಅವರು ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಬಿಎಂಟಿಸಿ ೮ನೇ ಡಿಪೋದ ಕಂಡಕ್ಟರ್ ಶಿವಲಿಂಗಯ್ಯ(೫೫)ಅವರು ಮೆಜೆಸ್ಟಿಕ್‌ನಿಂದ ಪೀಣ್ಯ ೨ನೇ ಹಂತಕ್ಕೆ ಹೋಗುತ್ತಿದ್ದ ೨೭೫ ನಂಬರ್ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೆಜೆಸ್ಟಿಕ್‌ನಿಂದ ಹೊರಟ ಬಸ್ ಬೆಳಿಗ್ಗೆ ೬.೩೦ರ ವೇಳೆ ಜಾಲಹಳ್ಳಿ ಕ್ರಾಸ್‌ನಲ್ಲಿ ಟ್ರಾಪಿಕ್ ಜಾಮ್ ಉಂಟಾಗಿದ್ದರಿಂದ ಸ್ವಲ್ಪ ದೂರದ ಪೊಲೀಸ್ ಸ್ಟೇಷನ್ ಜಂಕ್ಷನ್ ಮುಂಭಾಗ ಬಳಿ ಸರ್ವಿಸ್ ರಸ್ತೆಗೆ ಬಸ್‌ನ್ನು ತೆಗೆದುಕೊಳ್ಳಲು ಚಾಲಕ ಮುಂದಾಗಿದ್ದು ಶಿವಲಿಂಗಯ್ಯ ಅವರಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ.
ಕೆಳಗಿಳಿದ ಶಿವಲಿಂಗಯ್ಯ ಅವರು ಸರ್ವಿಸ್ ರಸ್ತೆಗೆ ಬಸ್ ತೆಗೆದುಕೊಳ್ಳಲು ಸೂಚನೆ ನೀಡುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಲಾರಿ ಚಾಲಕ ಪರಾರಿಯಾಗಿದ್ದು ಲಾರಿಯನ್ನು ವಶಪಡಿಸಿಕೊಂಡಿರುವ ಪೀಣ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.
Comments are closed.