ಕರ್ನಾಟಕ

ದಸರಾ ಉದ್ಘಾಟನೆಗೆ ನಾಡೋಜ ಚನ್ನವೀರ ಕಣವಿಗೆ ಆಹ್ವಾನ

Pinterest LinkedIn Tumblr

4chennaveera-kanaviclrಧಾರವಾಡ, ಸೆ. ೪- ಅಕ್ಟೋಬರ್ 1 ರಿಂದ ಪ್ರಾರಂಭವಾಗುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡವಂತೆ ನಾಡೋಜ ಕವಿ ಚನ್ನವೀರ ಕಣವಿ ಅವರಿಗೆ ಮೈಸೂರು ಜಿಲ್ಲಾಧಿಕಾರಿ ರಣದೀಪ್ ಹಾಗೂ ಮೇಯರ್ ಭೈರಪ್ಪ ಇಂದು ಆಹ್ವಾನ ನೀಡಿದರು.

ಧಾರವಾಡದ ಕಲ್ಯಾಣನಗರದಲ್ಲಿರುವ ಕಣವಿ ಅವರ ನಿವಾಸಕ್ಕೆ ತೆರಳಿದ ರಣದೀಪ್ ಹಾಗೂ ಭೈರಪ್ಪ ಅವರು ಅಕ್ಟೋಬರ್ 1 ರಂದು ದಸರಾಗೆ ಚಾಲನೆ ನೀಡಲು ಆಗಮಿಸುವಂತೆ ಆಹ್ವಾನ ಪತ್ರ ನೀಡಿದರು. ಈ ವೇಳೆ ಧಾರವಾಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಉಪಸ್ಥಿತರಿದ್ದರು.

ಅಕ್ಟೋಬರ್ 1 ರಿಂದ 11ರವರೆಗೆ ವಿಶ್ವ ವಿಖ್ಯಾತ ದಸರಾ ಮಹೋತ್ಸವ ನಡೆಯಲಿದ್ದು, ಅ. 1 ರಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸುವುದರ ಮೂಲಕ ದಸರಾ-2016 ಉದ್ಘಾಟಿಸಲು ನಾಡಿನ ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತು.

Comments are closed.