
ಲಂಡನ್: ಬ್ರಿಟನ್ನಿನ ಲೇಬರ್ ಪಕ್ಷದ ಹಿರಿಯ ಸಂಸದ, ಎರಡು ಮಕ್ಕಳ ತಂದೆ ಕೇತ್ ವಾಜ್ ಗಂಡು ವೇಶ್ಯೆಯರ ಬಳಿ ಸೆಕ್ಸ್`ಗಾಗಿ ಬೇಡಿಕೆ ಇಟ್ಟಿರುವ ವಿಡಿಯೋ ಬಹಿರಂಗವಾಗಿದ್ದು, ಬ್ರಿಟನ್ನಿನ ಗೃಹವ್ಯವಹಾರಗಳ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
8 ದಿನಗಳ ಹಿಂದೆ ಸಂಸದ ಪೂರ್ವ ಯೂರೋಪ್`ನ ಇಬ್ಬರು ಗಂಡು ವೇಶ್ಯೆಯರನ್ನ ಭೇಟಿಯಾಗಿದ್ದು, ಸೆಕ್ಸ್`ಗಾಗಿ ಬೇಡಿಕೆ ಇಟ್ಟ ವಿಡಿಯೋ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಅವರ ಜೊತೆ ಕಾಂಡೂಮ್ ಬಳಸದೇ ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
59 ವರ್ಷದ ಸಂಸದ ವಾಜ್, ವಲಸೆ ಮತ್ತು ಡ್ರಗ್ಸ್ ಅಪರಾಧಗಳನ್ನ ಮಾನಿಟರ್ ಮಾಡುವ ಗೃಹ ವ್ಯವಹಾರಗಳ ಆಯ್ಕೆ ಸಮಿತಿಗೆ ಸುಮಾರು 10 ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂತಹ ಅತ್ಯುನ್ನತ ಸ್ಥಾನದಲ್ಲಿರುವ ವಾಜ್ ಮಾಡಿರುವ ೀ ಕೃತ್ಯ ಸಂಚಲನಕ್ಕೆ ಕಾರಣವಾಗಿದೆ.
ಒಬ್ಬ ಮಗ ಮತ್ತು ಒಬ್ಬ ಮಗಳನ್ನ ಹೊಂದಿರುವ ವಾಜ್ ಪತ್ನಿ, ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು, ಪ್ರತಿಕ್ರಿಯಿಸಿರುವ ಸಂಸದ, ನಾನು ಸ್ಟಿಂಗ್ ಆಪರೇಶನ್ನಿನ ಸಂತ್ರಸ್ತ ಎಂದು ಹೇಳಿದ್ದಾರೆ.
Comments are closed.