ಅಂತರಾಷ್ಟ್ರೀಯ

ಭಾರತ ಹಸ್ತಾಂತರಿಸಿದ ದಾವೂದ್‍ನ ವಿಳಾಸಗಳಲ್ಲಿ 6 ವಿಳಾಸ ಸರಿ ಇದೆ: ವಿಶ್ವಸಂಸ್ಥೆ

Pinterest LinkedIn Tumblr

Dawood-Ibrahimನ್ಯೂಯಾರ್ಕ್: ಭೂಗತ ಪಾತಕಿ ಹಾಗೂ 1993ರ ಮುಂಬೈ ದಾಳಿಯ ಸಂಚುಕೋರ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ನೆಲೆಸಿದ್ದಾನೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಆತನ ಪತ್ತೆಗಾಗಿ ಭಾರತ ಹುಡುಕುತ್ತಿರುವ 9 ವಿಳಾಸಗಳಲ್ಲಿ 6 ವಿಳಾಸ ಸರಿ ಇದೆ. ಆದರೆ ಅದರಲ್ಲಿರುವ ಮೂರು ವಿಳಾಸ ತಪ್ಪಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ ದೃಢೀಕರಿಸಿದೆ.

ಆದಾಗ್ಯೂ ದಾವೂದ್‍ಗೆ ಪಾಕಿಸ್ತಾನ ಅಭಯ ನೀಡಿದೆ ಎಂಬ ಭಾರತದ ವಾದ ಒಪ್ಪುವಂತದ್ದು ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ.

ದಾವೂದ್ ಪಾಕಿಸ್ತಾನದಲ್ಲೇ ಇದ್ದು, ಬೇರೆ ಬೇರೆ ಸ್ಥಳಗಳಲ್ಲಿ ನೆಲೆಯೂರುತ್ತಿದ್ದಾರೆ. ದಾವೂದ್ ನೆಲೆಯೂರಿರುವ ಕೆಲವು ಸ್ಥಳಗಳ ವಿಳಾಸವನ್ನು ಭಾರತ ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು.

2013 ಸೆಪ್ಟೆಂಬರ್‍ ನಲ್ಲಿ ದಾವೂದ್ ಖರೀದಿಸಿದ ಹೊಸ ಫ್ಲಾಟ್‍ನ ಮಾಹಿತಿಯನ್ನೂ, ಆತನ ಮೂರು ಪಾಸ್‍ಪೋರ್ಟ್ ವಿವರಗಳನ್ನೂ ಭಾರತ ಪಾಕ್‍ಗೆ ಹಸ್ತಾಂತರಿತ್ತು. ಆದರೆ ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಪಾಕ್ ವಾದ ಮಾಡುತ್ತಿದೆ.

Comments are closed.