ನವದೆಹಲಿ: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಜವಾಹರ್ ಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಹೀಗೆಂದು ಹೇಳಿದವರು ಬೇರೆ ಯಾರೂ ಅಲ್ಲ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್!
ಮಧ್ಯಪ್ರದೇಶದ ಚ್ಚಿಂಡ್ವಾರಎಂಬಲ್ಲಿ ಸೋಮವಾರ ಬಿಜೆಪಿಯ ತಿರಂಗಾ ಯಾತ್ರೆಯ ಸಂದರ್ಭದಲ್ಲಿ ರ‍್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಜಾವಡೇಕರ್ 1987ರಲ್ಲಿ ಆರಂಭವಾದ ಹೋರಾಟವು 90 ವರ್ಷಗಳ ಕಾಲ ಮುಂದುವರಿಯಿತು. ನಾವು ಬ್ರಿಟಿಷರನ್ನು ಈ ದೇಶದಿಂದ ಓಡಿಸಿದೆವು. ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಪಂಡಿತ್ ನೆಹರು, ಭಗತ್ ಸಿಂಗ್, ರಾಜ್‍ಗುರು ಎಲ್ಲರನ್ನೂ ಗಲ್ಲಿಗೇರಿಸಲಾಯಿತು, ಕ್ರಾಂತಿವೀರ್ ಸಾವರ್ಕರ್, ಇನ್ನು ಕೆಲವು ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಬಲಿಯಾದರು ಎಂದಿದ್ದಾರೆ.
ಇದಿಷ್ಟೇ ಇಲ್ಲ, ಸರ್ದಾರ್ ಪಟೇಲ್ ಅವರು 1950ರಲ್ಲಿ ಮೃತಪಟ್ಟರು, ನೆಹರೂ ಅವರು 1964 ರಲ್ಲಿ ಮೃತಪಟ್ಟರು ಎಂದು ಹೇಳುವ ಮೂಲಕ ಇನ್ನಷ್ಟು ತಪ್ಪುಗಳನ್ನು ಭಾಷಣದಲ್ಲಿ ಹೇಳಿದ್ದಾರೆ.
Comments are closed.