ಕರ್ನಾಟಕ

ಝಿಕಾ ಭೀತಿ- ಅಥ್ಲೀಟ್ ಸುಧಾಸಿಂಗ್ ಆಸ್ಪತ್ರೆಗೆ

Pinterest LinkedIn Tumblr

sudha-singhclrಬೆಂಗಳೂರು ಆ ೨೩- ರಿಯೋ ಒಲಿಂಪಿಕ್ ವೇಳೆ ಝಿಕಾ ವೈರಸ್ ತಗುಲಿರುವ ಭೀತಿಯಿಂದ ಅಥ್ಲೀಟ್ ಸುಧಾಸಿಂಗ್ ಅವರನ್ನು ನಗರದ ನಾಗರಬಾವಿಯಲ್ಲಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತರ ಪ್ರದೇಶ ಮೂಲದ ಅಥ್ಲೀಟ್ ಸುಧಾಸಿಂಗ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಒಂದು ಸೊಳ್ಳೆಯೂ ಅವರ ಕೊಠಡಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಸುಧಾಸಿಂಗ್ ಇರುವ ಕೊಠಡಿಗೆ ಯಾರೋಬ್ಬರು ಭೇಟಿ ನೀಡದಂತೆ ಸೂಚಿಸಿರುವುದರಿಂದ, ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಹೊರ ಭಾಗದಲ್ಲಿ ಬೀಡುಬಿಟ್ಟಿದ್ದಾರೆ.

ಕಳೆದ ಶನಿವಾರ ರಿಯೋ ಒಲಿಂಪಿಕ್ಸ್ ಮುಗಿಸಿ ತವರಿಗೆ ವಾಪಾಸಾಗುವ ವೇಳೆ ಜ್ವರ ಹಾಗೂ ಸಂದುನೋವು ಕಾಣಿಸಿಕೊಂಡ ಅಥ್ಲೀಟ್’ ಸುಧಾ ಸಿಂಗ್, ನಿಯಮದಂತೆ ಬೆಂಗಳೂರು ಆಸ್ಪತ್ರೆಯಲ್ಲಿ ಝಿಕಾ ವೈರಸ್ ಪರೀಕ್ಷೆ ನಡೆಸಲಾಗುತ್ತಿದೆ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದ ೩೦ ವರ್ಷದ ಸುಧಾ ಸಿಂಗ್’ಗೆ ಸಂಧು ನೋವು, ಆಯಾಸ, ರಕ್ತದೊತ್ತಡದಲ್ಲಿ ಏರಿಳಿತ ಉಂಟಾದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಫತ್ರೆಗೆ ಕೊಂಡೊಯ್ಯಲಾಗಿತ್ತು. ಬ್ರೆಜಿಲ್’ನಲ್ಲಿ ಝಿಕಾ ಭೀತಿ ಇರುವುದರಿಂದ, ಆ ಬಗ್ಗೆ ಸುಧಾ ಸಾಕಷ್ಟು ಎಚ್ಚರಿಕೆ ವಹಿಸಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಇದು ಮೇಲ್ನೋಟಕ್ಕೆ ಸಾಮಾನ್ಯ ವೈರಸ್’ ಸೋಂಕಿನಂತೆ ಕಂಡುಬಂದಿದ್ದರೂ, ಹೆಚ್ಚಿನ ತನಿಖೆಗಾಗಿ ಸುಧಾಸಿಂಗ್ ಅವರ ರಕ್ತದ ಮಾದರಿಯನ್ನು ಈಗಾಗಲೇ ಪುಣೆಯ ಪ್ರಯೋಗಾಲಯದ ವೈರಾಲಜಿ ಇನ್ಸ್‌ಟಿಟ್ಯೂಟ್ ಫಾರ್ ಝಿಕಾ ಟೆಸ್ಟಿಂಗ್’ಗೆ ಕಳಿಸಲಾಗಿದೆ ಎಂದು ಡಾ. ಎಸ್ ಆರ್ ಸರಳ ತಿಳಿಸಿದ್ದಾರೆ. ಇಂದು ಅಥವಾ ನಾಳೆಯೊಳಗೆ ರಕ್ತದ ಮಾದರಿ ವೈದ್ಯರ ಕೈ ಸೇರಲಿದ್ದು, ವರದಿ ಬಂದ ನಂತರ ಮುಂದಿನ ಚಿಕಿತ್ಸೆ ಕೈಗೊಳ್ಳಲಾಗುವುದು ಎಂದು ಡಾ. ಲೋಕೇಶ್ ಎಂ.ಎನ್ ಅವರು ತಿಳಿಸಿದ್ದಾರೆ.

ಹಾಗೂ ಸುಧಾಸಿಂಗ್ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಇಂದು ದೆಹಲಿಯಿಂದ ತಜ್ಞರ ತಂಡವೊಂದು ನಗರಕ್ಕೆ ಆಗಮಿಸಲಿದ್ದು, ಪೋರ್ಟಿಸ್ ಆಸ್ಪತ್ರೆ ವೈದ್ಯರೊಂದಿಗೆ ಚರ್ಚಿಸಿ ಚಿಕಿತ್ಸೆ ನೀಡಲು ಮುಂದಾಗಲಿದ್ದಾರೆ. ಕಳೆದ ಭಾನುವಾರ ಅವರನ್ನು ಎಚ್೧ ಎನ್೧ ಹಾಗೂ ಡೆಂಗೆ, ಚಿಕನ್‌ಗುನ್ಯ ಪರೀಕ್ಷೆಗೆ ಒಳಪಡಿಸಿದಾಗ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.