
ಮುಂಬೈ: ಸಾಮಾಜಿಕ ತಾಣಗಳಲ್ಲಿ, ಮಾಧ್ಯಮಗಳಲ್ಲಿ ನಟಿ ರಾಧಿಕಾ ಆಪ್ಟೆಯ ಬೆತ್ತಲೆ ಚಿತ್ರದ್ದೇ ಸುದ್ದಿ. ಇದೀಗ ಸುದ್ದಿಯ ಹಿಂದಿನ ರಹಸ್ಯ ಬಯಲಾಗಿದೆ.
ಎರಡ್ಮೂರು ವಾರಗಳಿಂದ ರಾಧಿಕಾ ಆಪ್ಟೆಯದ್ದೇ ಹಾಟ್ ಟಾಪಿಕ್. ಮೂರು ಮುಕ್ಕಾಲು ಜನಕ್ಕೆ ಗೊತ್ತಿಲ್ಲದ ಚಿತ್ರವೊಂದು ರಾತ್ರೋ ರಾತ್ರಿ ಫೇಮಸ್ ಆಗಿದೆ. ಇದನ್ನು ಹತ್ತಿರದಿಂದ ನೋಡುತ್ತಿರುವ ಬಿ ಟೌನ್ ಮಂದಿಗೆ ಅಯ್ಯೋ ಈ ಹುಡುಗಿಗೆ ಇದೆಲ್ಲ ಬೇಕಿತ್ತಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಕೂಡ, ‘ನಮ್ ತಲೈವಾ ಹುಡುಗಿಗೆ ಇದೆಲ್ಲ ಬೇಕಿಲ್ಲಪ್ಪಾ’ ಎನ್ನುತ್ತಿದ್ದಾರಂತೆ.
ಇಷ್ಟಕ್ಕೂ ಆಗಿದ್ದೇನು? ‘ಪರ್ಚೆಡ್’ ಚಿತ್ರದಲ್ಲಿ ರಾಧಿಕಾ ಆಪ್ಟೆ ನಟಿಸಿದ್ದು, ಅದರ ಸೆಮಿ ನ್ಯೂಡ್ ದೃಶ್ಯಗಳು ಲೀಕ್ ಆಗಿರೋದು ಹಳೆಯ ಸುದ್ದಿ. ಆದರೆ, ಹೀಗೆ ತಮ್ಮ ಚಿತ್ರದ ಹಾಟ್ ಸೀನ್ಗಳನ್ನು ಹೊರಗಡೆ ಬಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ರಾಧಿಕಾ ಆಪ್ಟೆಯೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಅದಕ್ಕಾಗಿ ಚಿತ್ರದ ನಿರ್ಮಾಪಕ ಅಸೀಮ್ ಬಜಾಜ್ ಅವರಿಂದ ಕೈ ತುಂಬಾ ಹಣ ತೆಗೆದುಕೊಂಡಿದ್ದಾರಂತೆ. ದುಡ್ಡು ಕೊಟ್ಟರೆ ಆಪ್ಟೆ ಎಲ್ಲದಕ್ಕೂ ಆಪ್ತರಾಗುತ್ತಾರೆಂಬ ಗುಟ್ಟು ಈಗ ರಟ್ಟಾಗಿದೆ.
Comments are closed.