ಅಂತರಾಷ್ಟ್ರೀಯ

ಮಕ್ಕಳು ಧರಿಸುವ ಶೂ ಗಳು ಬೆವರಿನ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ…

Pinterest LinkedIn Tumblr

shoes

ಶಾಲೆಗೆ ಹೋಗುವ ಮಕ್ಕಳು ದರಿಸುವ ಶೂ ಗಳು ಬೆವರಿನ ವಾಸನೆ ಬರುತ್ತಿದ್ದರೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ ಬದಲಿಗೆ ಮಕ್ಕಳ ಬೆಲೆಬಾಳುವ ಶೂ ಗೆ ದುರ್ಗಂಧದಿಂದ ಮುಕ್ತಿ ನೀಡಿ ಸ್ಮೆಲ್ ಹೋಗಲಾಡಿಸಿ ಸ್ಮೈಲ್ ನೀಡುವ ಕಾಲ ಬಂದಿದೆ. ಶೂಗಳ ವಾಸನೆ ಹೋಗಲಾಡಿಸಲು ಇಲ್ಲಿದೆ ಪರಿಹಾರ.

ಶೂಗಳನ್ನು ಉಪಯೋಗಿಸಿ ಆದ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಶೂ ಗಳಲ್ಲಿ ಇರುವ ಬೆವರಿನ ದುರ್ಗಂಧ ಮಾಯವಾಗುತ್ತದೆ.

ಪ್ರತೀ ದಿನ ಒಂದೇ ಜೊತೆ ಶೂ ಬಳಸಬೇಡಿ. ಎರಡು ಜೊತೆ ಶೂ ಗಳನ್ನು ಬಳಸಿ. ಒಂದು ಜೋಡಿ ಒಣಗಿಸುವಾಗ ಮತ್ತೊಂದು ಜೋಡಿಯನ್ನು ಉಪಯೋಗಿಸಿ.

ಶೂ ಗಳನ್ನು ಉಪಯೋಗಿಸಿದ ಮೇಲೆ ಅದನ್ನು ತೊಳೆಯಿರಿ. ತೊಳೆಯಲು ಬಾರದಿರುವ ಶೂ ಆಗಿದ್ದರೆ ಅದರ ಒಳಗೆ ಕೆಲವು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹಾಕಿಡಿ. ಇದರಲ್ಲಿ ಇರುವ ಸಿಟ್ರಸ್ ಆಮ್ಲ ದುರ್ಗಂಧವನ್ನು ತಡೆಯುತ್ತದೆ.

ನೀರಿನಲ್ಲಿ ಒಂದು ಹನಿ ವಿನೇಗರ್ ಹಾಕಿ ಅದನ್ನು ಒಂದು ಬಟ್ಟೆಗೆ ಹಾಕಿಕೊಂಡು ಶೂಗಳನ್ನು ಸ್ವಚ್ಚಗೊಳಿಸಿದರೆ ಶೂಗಳಿಂದ ಬರುವ ಕೆಟ್ಟ ವಾಸನೆ ದೂರವಾಗುತ್ತದೆ.

Comments are closed.