ನವದೆಹಲಿ: ಗರ್ಭಿಣಿಯಾಗಿರುವಾಗಲು ಕೆಲಸ ಮಾಡುವ ತಮ್ಮ ನಂಬಿಕೆಯ ಬಗ್ಗೆ ಇತ್ತೀಚೆಗಷ್ಟೇ ತೆರೆದುಕೊಂಡಿದ್ದ ಬಾಲಿವುಡ್ ನಟಿ ಕರೀನಾ ಕಪೂರ್, ತಮ್ಮ 80 ನೆಯ ವಯಸ್ಸಿನವರೆಗೆ ನಟನೆ ಮುಂದುವರೆಸುವ ಇರಾದೆ ಇದೆ ಎಂದು ಹೇಳಿದ್ದಾರೆ.
ನಟನೆಯ ಬಗ್ಗೆ ತಮ್ಮ ಪ್ರೀತಿಯನ್ನು ಮತ್ತೆ ವಿಶದಪಡಿಸಿರುವ 35 ವರ್ಷದ ನಟಿ “ನಾನು ನನ್ನ ಕೆಲಸ ಇಷ್ಟಪಡುತ್ತೇನೆ. ನನ್ನ ತಾಯಿಯ ಗರ್ಭದಲ್ಲಿ ಇದ್ದಾಗಿಲಿಂದಲೂ ನನಗೆ ನಟಿಯಾಗುವ ಆಸೆಯಿತ್ತು, ಆದುದರಿಂದ ನಟನೆಯನ್ನು 80 ತುಂಬುವವರೆಗೂ ಮುಂದುವರೆಸಲಿದ್ದೇನೆ” ಎಂದಿದ್ದಾರೆ.
ಕರೀನಾ ಗರ್ಭಿಣಿಯಾಗಿರುವಾಗ ನಟಿಸುವರೇ ಅಥವಾ ಇಲ್ಲವೇ ಎಂಬ ವದಂತಿಗಳು ಬಾಲಿವುಡ್ ನಲ್ಲಿ ಬಹು ಚರ್ಚಿತ ಮಾತುಕತೆಗಳಾಗಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ‘ಕಿ ಅಂಡ್ ಕ’ ನಟಿ “ನಾವು ಗರ್ಭಿಣಿಯಾಗಿರುವಾಗ ಕೆಲಸ ಮಾಡಲಾಗುವುದಿಲ್ಲ ಎಂಬುದು ಪುರಾಣ ಎಂದಿದ್ದ ಅವರು ಹೀಗಿದ್ದೂ ನಾನು ವಿರಮಿಸುತ್ತಿದ್ದೇನೆ” ಎಂದಿದ್ದರು.
ಶೀಘ್ರ ತಾಯಿಯಾಗಲಿರುವ ಕರೀನಾ ತನ್ನ ಮಗುವಿಗಾಗಿ ಏನೇನು ಶಾಪಿಂಗ್ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ “ನೀವುಗಳು ಈಗಾಗಲೇ ನಿರ್ಧರಿಸಿದ್ದೀರಿ, ಏನಾಗಬೇಕು, ಎಲ್ಲಿ ಆಗಬೇಕು ಮತ್ತು ನಾನು ಎಷ್ಟು ವ್ಯಯಿಸಬೇಕು ಎಂಬುದನ್ನು” ಎಂದಿದ್ದಾರೆ.
Comments are closed.