
ನವದೆಹಲಿ: ದೆಹಲಿಯ ಶಹಬಾದ್ ಪ್ರದೇಶದಲ್ಲಿ ಮಹಿಳೆ ಬ್ಯಾಗ್ ದೋಚಿ ಪರಾರಿಯಾಗುತ್ತಿದ್ದ ಕಳ್ಳರನ್ನು ಹಿಡಿಯಲು ಬೆನ್ನಟ್ಟಿಹೋದ ಪೇದೆಯನ್ನು ದುಷ್ಕರ್ವಿುಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಮೃತ ಪೇದೆ ಆನಂದ್ ಶುಕ್ರವಾರ ರಾತ್ರಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಮೂವರು ಆಗಂತುಕರು ದಾಳಿ ನಡೆಸಿ ಬ್ಯಾಗ್ ದೋಚಿದ್ದಾರೆ. ಬವನಾ ಪೊಲೀಸ್ ಚೌಕಿಯಲ್ಲಿ ಕರ್ತವ್ಯನಿರತ ಪೇದೆಗೆ ವಿಷಯ ತಿಳಿಯುತ್ತಿದ್ದಂತೆ ಕಳ್ಳರ ಬೇಟೆಗೆ ದುಂಬಾಲು ಬಿದ್ದ ಪೇದೆ ಮೇಲೆ ಕಳ್ಳರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
Comments are closed.