ಪ್ರಮುಖ ವರದಿಗಳು

ಈತ ತನ್ನ ತಂಗಿಗೆ ನೀಡಿದ ರಕ್ಷಾ ಬಂಧನದ ಗಿಫ್ಟ್ ನೋಡಿ ನೀವೇ ದಂಗಾಗಬಹುದು !!!

Pinterest LinkedIn Tumblr

rakhi-gift

ರಾಮಗಡ (ಜಾರ್ಖಂಡ್): ರಕ್ಷಾ ಬಂಧನಕ್ಕೆ ಸಹೋದರಿಗೆ ವಿಧ ವಿಧದ ಉಡುಗೊರೆ ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬರು ರಾಖಿ ಕಟ್ಟಿದ ತನ್ನ ಸಹೋದರಿಗೆ ಶೌಚಾಲಯ ಕಟ್ಟಿಸಿಕೊಟ್ಟು ಭಿನ್ನತೆ ಮೆರೆದಿದ್ದಾನೆ. ಜಾರ್ಖಂಡ್ನ ರಾಮಗಢ ನಿವಾಸಿಯಾದ ಪಿಂಟು ಇದಕ್ಕೆ ಸಾಕ್ಷಿಯಾದ ಯುವಕ.

ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡು ಈ ನಿರ್ಧಾರ ಮಾಡಿರುವುದಾಗಿ ಪಿಂಟು ಹೇಳುತ್ತಾರೆ. ಬಯಲು ಶೌಚ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಮರ್ಯಾರೆಗೇಡು ಎಂಬುದನ್ನು ಮನಗಂಡು ಮನೆಯಲ್ಲಿ ಶೌಚಾಲಯ ನಿರ್ಮಿಸಿ ಬಯಲು ಶೌಚಕ್ಕೆ ಮುಕ್ತಿ ದೊರಕಿಸಿದ್ದೇನೆ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸ್ಚಚ್ಛ ಸರ್ವೆಕ್ಷಣಾ-2017 ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಿ ದೇಶ ಶುಚಿಯಾಗಿಡಲು ಹೆಚ್ಚಿನ ಸಂಖ್ಯೆಯ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿಕೊಂಡಿದ್ದರು. ಈ ಸಮಾರಂಭದಲ್ಲಿ ದೇಶದ 114 ನಗರಗಳು ಬಯಲುಮುಕ್ತ ಶೌಚ ನಗರಗಳಾಗಿವೆ ಎಂದಿದ್ದರು.

Comments are closed.