
ಚೆನ್ನೈ: ಒಲಿಂಪಿಕ್‍ನಲ್ಲಿ ರಜತ ಗೆದ್ದು ದಾಖಲೆ ನಿರ್ಮಿಸಿದ ಸಿಂಧುಗೆ ಅಭಿನಂದನೆ, ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ದೊಡ್ಡ ದೊಡ್ಡ ತಾರೆಗಳು ಕೂಡ ಸಿಂಧುವಿನ ಆಟವನ್ನು ನೋಡಿ ಅಭಿನಂದಿಸಿದ್ದಾರೆ. ಪಂದ್ಯ ಮುಗಿದ ನಂತರ ರಜನಿಕಾಂತ್, ಅಮಿತಾಬ್ ಬಚ್ಚನ್, ಪ್ರಧಾನಿ ಮೋದಿ, ಸೆಹ್ವಾಗ್, ಸೇರಿದಂತೆ ಹಲವಾರು ಗಣ್ಯರು ಟ್ವೀಟ್ ಮಾಡಿ ಸಿಂಧುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅದರಲ್ಲೂ ಸೂಪರ್ ಸ್ವಾರ್ ರಜನಿಕಾಂತ್ ಸಿಂಧುವಿನಗೆ ನಾನು ನಿನ್ನ ಅಭಿಮಾನಿ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಮೆಡಲ್ ತೆಗೆದುಕೊಂಡು ಬಂದ ಸಿಂಧು ನಿನ್ನ ಜೊತೆ ನಾನು ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ಶೋಭಾ ಡೇಗೆ ಟಾಂಗ್ ಕೊಟ್ಟಿದ್ದಾರೆ.
Comments are closed.