ಮಂಗಳೂರು: ವಾಸ್ತು ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮನೆಯಲ್ಲಿನ ಪ್ರತಿಯೊಂದು ಮೂಲೆ ಮತ್ತು ಒಳಗಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯ, ಸಂಬಂಧ ಹಾಗೂ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಬೆಡ್ ರೂಮ್ನಲ್ಲಿ ನಾವು ಇಟ್ಟುಕೊಳ್ಳುವಂತಹ ಪ್ರತಿಯೊಂದು ವಸ್ತುವಿನ ಬಗ್ಗೆ ನಾವು ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು.
ಮನೆಯಲ್ಲಿ ಇಡುವಂತಹ ವಸ್ತುಗಳಿಂದಾಗಿ ನಕಾರಾತ್ಮಕ ಅಂಶಗಳು ಬರಬಹುದು. ಇದರಿಂದ ನಕಾರಾತ್ಮಕ ಅಂಶಗಳು ಮನೆಯೊಳಗೆ ಪ್ರವೇಶ ಮಾಡುವುದು ಮಾತ್ರವಲ್ಲದೆ ಸಂಬಂಧದಲ್ಲೂ ಬಿರುಕು ಕಾಣಿಸಿಕೊಳ್ಳಬಹುದು.
ಬೆಡ್ ರೂಮ್ ನ್ನು ಚೆನ್ನಾಗಿ ಅಲಂಕರಿಸುವಾಗ ಕೆಲವೊಂದು ವರ್ಣಚಿತ್ರಗಳನ್ನು ನಾವು ಇಟ್ಟುಕೊಳ್ಳುತ್ತೇವೆ. ಆದರೆ ಈ ಲೇಖನದಲ್ಲಿ ಬೆಡ್ ರೂಮ್ನಲ್ಲಿ ಇಡಲೇಬಾರದ ಕೆಲವು ವರ್ಣಚಿತ್ರಗಳ ಬಗ್ಗೆ ಚರ್ಚಿಸಲಿದ್ದೇವೆ. ಇಂತಹ ವರ್ಣಚಿತ್ರಗಳು ನಿಮ್ಮಲ್ಲಿ ನಕಾರಾತ್ಮಕತೆಯನ್ನು ಉಂಟು ಮಾಡಿ ಸಂಗಾತಿ ಜತೆಗಿನ ಸಂಬಂಧಕ್ಕೂ ಮಾರಕವಾಗಬಹುದು.
ಬೆಡ್ ರೂಮ್ ನಲ್ಲಿ ಕಡೆಗಣಿಸಬೇಕಾದ ವರ್ಣಚಿತ್ರಗಳ ಬಗ್ಗೆ ತಿಳಿಯಿರಿ…..
1.ಬೆಡ್ ರೂಮ್ನಲ್ಲಿ ಗೊಂದಲದ ಯಾವುದೇ ವರ್ಣಚಿತ್ರಗಳನ್ನು ಇಡಬೇಡಿ. ಇದನ್ನು ಇಟ್ಟರೆ ನಿಮ್ಮ ಹಾಗೂ ಸಂಗಾತಿ ಮಧ್ಯೆ ಒಮ್ಮತದ ನಿರ್ಧಾರ ಸಾಧ್ಯವಿಲ್ಲ. ಯಾವಾಗಲೂ ಗೊಂದಲದಲ್ಲಿ ಇರುತ್ತೀರಿ. ಗೊಂದಲದ ಆಧುನಿಕ ವರ್ಣಚಿತ್ರವು ಖುದ್ದು ಗೊಂದಲದ ಗೂಡಾಗಿರುವ ಕಾರಣದಿಂದ ಅದಕ್ಕೆ ಯಾವುದೇ ಪರಿಹಾರವಿರುವುದಿಲ್ಲ.
2.ಹೆಚ್ಚಿನ ಮನೆಗಳಲ್ಲಿ ನಾವು ಈ ಚಿತ್ರಕಲೆಯನ್ನು ಕಾಣುತ್ತೇವೆ. ಆದರೆ ಇದನ್ನು ಬೆಡ್ ರೂಮ್ ನಲ್ಲಿ ಇಡಬೇಡಿ. ಯಾಕೆಂದರೆ ಸಂಗಾತಿಯು ಮುಖವಾಡ ಧರಿಸಿಕೊಂಡು ಸಂಬಂಧದಲ್ಲಿ ಇರಬಹುದು. ಇದರಿಂದ ಸಂಬಂಧವು ಕೆಡಬಹುದು.
3.ನಾಲ್ಕು ಅಥವಾ ಐದು ಮಂದಿ ಮಹಿಳೆಯರೊಂದಿಗೆ ಒಬ್ಬ ಪುರುಷನು ನಿಂತಿರುವಂತಹ ವರ್ಣಚಿತ್ರವನ್ನು ನೀವು ನೋಡಿರಬಹುದು. ಇಂತಹ ವರ್ಣಚಿತ್ರವು ಬಹುಪತ್ನಿತ್ವವನ್ನು ಸೂಚಿಸುತ್ತದೆ. ಬೆಡ್ ರೂಮ್ನಲ್ಲಿ ಇದನ್ನು ಇಡಲೇಬಾರದು.ಇಂತಹ ವರ್ಣಚಿತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕು.
4.ಶವಗಳು, ಗುಂಡು, ಮಕ್ಕಳು ಅಳುವ ಮತ್ತು ಜನರು ಸಾಯುವಂತಹ ವರ್ಣಚಿತ್ರಗಳನ್ನು ಬೆಡ್ ರೂಮ್ನಿಂದ ದೂರವಿಡಿ.
5.ತಮ್ಮ ಬೇಟಿಗೆ ಕಾಯುತ್ತಿರುವಂತಹ ಚಿತ್ರವಿರುವ ಮತ್ತು ಬೇಟೆ ಸಿಕ್ಕಿದ ಬಳಿಕ ಅದನ್ನು ಆನಂದಿಸುವಂತಹ ವರ್ಣಚಿತ್ರಗಳನ್ನು ಕಡೆಗಣಿಸಿ. ಇದು ಸಂಬಂಧದಲ್ಲಿ ಹಿಂಸೆಯನ್ನು ಉಂಟು ಮಾಡುವುದು. ಇಂತಹ ಯಾವುದೇ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿ.



Comments are closed.