ಅಂತರಾಷ್ಟ್ರೀಯ

ಭಾರತದ ‘ಬೆಳ್ಳಿ’ ತಾರೆ ಸಿಂಧು ! ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಚಾರಿತ್ರಿಕ ಸಾಧನೆ

Pinterest LinkedIn Tumblr

sindhu

ರಿಯೋ ಡಿ ಜನೈರೋ: ವಿಶ್ವದ ಅಗ್ರ ಶ್ರೇಯಾಂಕಿತೆ ಸ್ಪೇನ್ನ ಕ್ಯಾರೊಲಿನ್ ಮರಿನ್ ವಿರುದ್ಧ ದಿಟ್ಟ ಹೋರಾಟ ನಡೆಸಿದ ಭಾರತದ ಪಿ. ವಿ. ಸಿಂಧು ಗೆಲುವಿನ ಹೊಸ್ತಿಲಲ್ಲಿ ಎಡವಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ಭಾರತಕ್ಕೆ ರಿಯೋ ಒಲಿಂಪಿಕ್ಸ್ನಲ್ಲಿ ಎರಡನೇ ಪದಕ ತಂದುಕೊಟ್ಟರು.

sindhu1

BADMINTON-OLY-2016-RIO

BADMINTON-OLY-2016-RIO-PODIUM

BADMINTON-OLY-2016-RIO-PODIUM

ಫೈನಲ್ ಪಂದ್ಯದಲ್ಲಿ ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಮಣಿಸಿದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ವಿರುದ್ಧ ಮತ್ತೆ ಆಕ್ರಮಣ ಆಟವಾಡಿದ ಮರಿನ 21-15 ಅಂಕಗಳಿಂದ ಸೋಲಿಸಿ ಸ್ವರ್ಣಕ್ಕೆ ಮುತ್ತಿಟ್ಟರು. ಇದರೊಂದಿಗೆ ಸಿಂಧು ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಸಾಂಬಾ ನಾಡಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್ ನ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು ಭಾರತದ ಪರ ಬೆಳ್ಳಿ ಪದಕಕ್ಕೆ ತೃಪ್ತರಾದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್‌ ಅವರು ಸೆಮಿಫೈನಲ್‌ ಹಂತದ ವರೆಗೆ ಬಂದಿದ್ದರು. ನಂತರ ಕಂಚು ಜಯಿಸಿದ್ದು ಒಲಿಂಪಿಕ್ಸ್ ದಾಖಲೆಯಾಗಿತ್ತು.

ಸಿಂಧು ಅವರು ಗುರುವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21–19, 21–10ರಲ್ಲಿ ಜಪಾನ್‌ನ ನೊಜುಮಿ ಒಕುಹರಾ ಎದುರು ಜಯ ಪಡೆದು ಫೈನಲ್‌ ತಲುಪಿದ್ದರು.

ಬದ್ಧತೆಗೆ ಒಲಿದ ಯಶಸ್ಸು: ಎಂಟು ವರ್ಷದವಳಾಗಿದ್ದಾಗಿನಿಂದಲೇ ಸಿಂಧು ಬ್ಯಾಡ್ಮಿಂಟನ್ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದರು. ಇವರ ತಂದೆ ರಮಣ್‌ ಮತ್ತು ತಾಯಿ ಪಿ. ವಿಜಯಾ ಅವರು ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರರಾಗಿದ್ದರು.

ಪ್ರತಿನಿತ್ಯ ಬೆಳಗಿನ ಜಾವ ನಾಲ್ಕು ಗಂಟೆಗೆ ಅಭ್ಯಾಸ ಮಾಡಲು ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅಕಾಡೆಮಿಗೆ ತೆರಳುತ್ತಿದ್ದರು. ಸಂಜೆಯೂ ಅಭ್ಯಾಸದಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಆಟದ ಬಗ್ಗೆ ಹೊಂದಿದ್ದ ಬದ್ಧತೆಯೇ ಸಿಂಧು ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.

21 ವರ್ಷದ ಸಿಂಧು ಇದೇ ವರ್ಷ ಗುವಾಹಟಿಯಲ್ಲಿ ನಡೆದ ಸೌತ್‌ ಏಷ್ಯನ್‌ ಕ್ರೀಡಾಕೂಟದ ಸಿಂಗಲ್ಸ್ ಮತ್ತು ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ಸಿಂಧು ಅನನ್ಯ ಸಾಧನೆ: ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಮತ್ತು ಎರಡು ಸಲ ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎನ್ನುವ ಕೀರ್ತಿಯನ್ನೂ ಹೊಂದಿದ್ದಾರೆ.

2013ರಲ್ಲಿ ಗುವಾಂಜ್‌ ಜೌ ಮತ್ತು 2014ರಲ್ಲಿ ಕೊಪನ್‌ಹೇಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಅವರು ಈ ಸಾಧನೆ ಮಾಡಿದ್ದಾರೆ. ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಸಿಂಧು ತರಬೇತಿ ಪಡೆಯುತ್ತಿದ್ದರು.

ಸಚಿನ್‌ ಧನ್ಯವಾದ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗೆ ನೀಡುತ್ತಿರುವ ಬೆಂಬಲಕ್ಕಾಗಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಅವರು ಎಲ್ಲ ಭಾರತೀಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಂಧು ಸಾಧನೆಗಳ ಕಿರು ಪರಿಚಯ

2011 ನೇ ಕಾಮನ್ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ
2013 ಮತ್ತು 14 ನೇ ಸಾಲಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕದ ಸಾಧನೆ.
2014 ನೇ ಕಾಮನ್ವೆಲ್ತ್ ಗೇಮ್ ನಲ್ಲಿ ಕಂಚು

Comments are closed.