ನ್ಯೂಯಾರ್ಕ್ : ಅಮೆರಿಕದ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೂ ನಗ್ನತೆಗೂ ಏನು ಸಂಬಂಧ?.ಅಲ್ಲವಾದರೆ ಮಹಿಳೆಯರ ನಗ್ನ ಪ್ರತಿಭಟನೆ ಎದುರಿಸಿ,ಪತ್ನಿಯ ನಗ್ನ ಚಿತ್ರ ಪ್ರಕಟವಾದ ಬಳಿಕ ಇದೀಗ ಅವರದ್ದೇ ನಗ್ನ ಮೂರ್ತಿಗಳನ್ನು ಅಮೆರಿಕದ ಪ್ರಮುಖ ನಗರಗಳ ಪಾರ್ಕ್‌ಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗಿದೆ.
ನ್ಯೂಯಾರ್ಕ್, ಲಾಸ್ ಎಂಜಲೀಸ್, ಸೀಟ್ಲ ,ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಕ್ಲೀವ್ ಲ್ಯಾಂಡ್‌ನಲ್ಲಿ ಇಡಲಾಗಿದ್ದ ಮೂರ್ತಿಗಳತ್ತ ಆಪಾರ ಸಂಖ್ಯೆಯ ದಾರಿ ಹೋಕರು ಮುಗಿಬಿದ್ದು ಭಿನ್ನ ವಿಭಿನ್ನ ಭಂಗಿಗಳಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡರು.
ಮೂರ್ತಿಗಳನ್ನು ನಾವೇ ಇಟ್ಟಿರುವುದಾಗಿ ಕ್ಲೀವ್ ಲ್ಯಾಂಡ್‌ನ ‘ಇಂಡಿಕ್ಲೈನ್’ ಎಂಬ ಸಂಘಟನೆ ಹೇಳಿಕೊಂಡಿದೆ. ವಿಗ್ರಹಗಳಲ್ಲಿ ‘ದಿ ಎಂಪರರ್ ಹ್ಯಾಸ್ ನೋ ಬಾಲ್ಸ್’ ಎಂದು ಬರೆಯಲಾಗಿತ್ತು. ಅದೆಲ್ಲಕ್ಕೂ ವಿಶೇಷವೆಂದರೆ ಮೂರ್ತಿ ನಗ್ನವಾಗಿದ್ದರೂ ಗುಪ್ತಾಂಗ ಇಲ್ಲದಂತೆ ಬಿಂಬಿಸಲಾಗಿತ್ತು.
ಟ್ರಂಪ್ ಅಭಿಮಾನಿಗಳು ಈ ಬಗ್ಗೆ ಕಿಡಿಕಾರಿದ್ದು ಬಳಿಕ ಮಾರ್ತಿಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಒಟ್ಟಿನಲ್ಲಿ ಈ ವಿದ್ಯಮಾನ ಅಮೆರಿಕದಸಾಮಾನ್ಯ ಜನರಿಗೆ ಒಂದು ವಿಭಿನ್ನ ಮನೋರಂಜನೆ ನೀಡಿತು.
Comments are closed.