ದಿಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡದೆ, ಕೆಲಸದ ಸಮಯದಲ್ಲಿ ಕಂಪ್ಯೂಟರ್ ಮೂಲಕ ಸಿನಿಮಾ ನೋಡುತ್ತಿದ್ದ ಸಿಬ್ಬಂದಿಯನ್ನು ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಪತ್ತೆ ಮಾಡಿ ಅಮಾನತು ಮಾಡಿದ್ದಾರೆ. ದಿಢೀರ್ ಭೇಟಿ ನೀಡಿದ ಅವರು ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ ದೀರ್ಘ ಸರತಿಯ ಸಾಲುಕಂಡು ನಂತರ ಒಳಾಗೇನಾಗಿದೆ ನೋಡೋಣ ಎಂದು ಬಂದಾಗಲೇ ಆಸಲಿ ಸತ್ಯ ಏನೆಂಬುದು ಗೊತ್ತಾಗಿದೆ.
ರೋಗಿಗಳಿಗೆ ಉಪಚಾರ ಮಾಡಬೇಕಾದ ಸಿಬ್ಬಂದಿಯೊಬ್ಬ ತನ್ನ ಕಂಪ್ಯೂಟರ್‌ನಲ್ಲಿ ಸಿನಿಮಾ ನೋಡುತ್ತಿದ್ದನ್ನು ಪತ್ತೆ ಮಾಡಿ ಆತನಿಗೆ ಬೆವರಿಳಿಸಿ ಕಡೆಗೆ ಮೇಲಧಿಕಾರಿಯ ಬಳಿ ಬಳಿ ಎಳೆದುಕೊಂಡು ಹೋಗಿ ಅಮಾನತು ಮಾಡಿಸಿದ್ದಾರೆ. ತನ್ನ ನೌಕರಿ ಉಳಿಸಿಕೊಳ್ಳಲು ಆತ ಸಿಸೋಡಿಯಾ ಕಾಲಿಗೂ ಬಿದ್ದಿದ್ದಾನೆ. ಇದನ್ನು ಆಮ್ ಆದ್ಮಿ ಪಕ್ಷವು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಇದನ್ನು 20 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
-ಉದಯವಾಣಿ
Comments are closed.