
ಮಂಗಳೂರು, ಆ.19: ರೌಡಿ ಶೀಟರ್ ಎಂದು ಹೇಳಲಾದ ಯುವಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದ ಘಟನೆಯೊಂದು ಮಂಗಳೂರು ಹೊರವಲಯದ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ನಗರದ ಪಂಪ್‌ವೆಲ್ ಸಮೀಪದ ಕಪಿತಾನಿಯೋ ನಿವಾಸಿ ಶರಣ್ (31) ಎಂದು ಗುರುತಿಸಲಾಗಿದ್ದು, ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶರಣ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



ಚರಣ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಆಟೋ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದು, ಅಟೋ ರಿಕ್ಷಾ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ಸಮೀಸುತಿದ್ದಂತೆಯೇ ಬೊಲೇರೋ ವಾಹನದಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಚರಣ್ ಪತ್ನಿ ಹಾಗೂ ಮಗುವಿನ ಎದುರೇ ಚರಣ್ ಮೇಲೆ ದಾಳಿ ಮಾಡಿ, ಮಾರಾಕಸ್ತ್ರಗಳಿಂದ ಯದ್ವತದ್ವ ಕಡಿದುಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚರಣ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ತ್ರಾವ ಉಂಟಾದ್ದುದ್ದರಿಂದ ಚಿಕಿತ್ಸೆ ಫಲಕಾರಿ ಯಾಗದೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ರೀಕ್ಷಾ ಚಾಲಕ ಶರಣ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಇವರು ಪ್ರಯಾಣಿಸುತ್ತಿದ್ದ ಆಟೋ ಚಾಲಕನ ಹೇಳಿಕೆ ಪ್ರಕಾರ ಈ ದಾಳಿ ಸಂದರ್ಭ ಮಗುವಿಗೂ ಸ್ವಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದ್ದರೂ ಈ ಬಗ್ಗೆ ಯಾವೂದೇ ದೂರು ದಾಖಲಾಗಿಲ್ಲ.

ದಾಳಿ ನಡೆಸಿದ ತಂಡದ ಮೂವರು ಆರೋಪಿಗಳನ್ನು ಅಟೋ ಚಾಲಕ ಗುರುತು ಹಿಡಿದ್ದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದವರಲ್ಲಿ ಮೂಡುಶೆಡ್ಡೆ ನಿವಾಸಿ ರಿಝ್ವೆನ್, ಇಮ್ರಾನ್ ಹಾಗೂ ಸೈಫುದ್ಧೀನ್ ಎಂಬವರನ್ನು ಗುರುತಿಸಿದ್ದು, ಇನ್ನೊಬ್ಬನ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಚರಣ್ ತಾಯಿಗೆ ಇತ್ತೀಚಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ಮೂಡುಶೆಡ್ಡೆಗೆ ತೆರಳಿದ್ದ ಚರಣ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಮಂಗಳೂರಿಗೆ ಹಿಂತಿರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹಳೇ ವೈಷಮ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.