ಕರ್ನಾಟಕ

ರಾಕ್ ಲೈನ್ ವೆಂಕಟೇಶ್ ಚಿತ್ರದಲ್ಲಿ ನಾಯಕಿಯಾಗ್ತಾರಾ ಅಮಲಾ ಪೌಲ್?

Pinterest LinkedIn Tumblr

amalaಬೆಂಗಳೂರು: ರಾಕ್ ಲೈನ್ ವೆಂಕಟೇಶ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಅಭಿನಯಿಸಲು ಕಡೆಗೂ ನಾಯಕಿ ಯಾರಾಗ್ತಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ತಮಿಳು ಚಿತ್ರದ ರಿಮೇಕ್ ‌ಕನ್ನಡದಲ್ಲಿ ರಾಕ್ ಲೈನ್ ವೆಂಕಟೇಶ್ ಚಿತ್ರ ನಿರ್ಮಿಸುತ್ತಿದ್ದಾರೆ.

ನಾಯಕ ಮನೋರಂಜನೆ ಜತೆಗೆ ಡ್ಯುಯೆಟ್ ಹಾಡಲು ನಾಯಕಿ ಶೋಧದಲ್ಲಿ ಇದೆ ಚಿತ್ರತಂಡ. ಈ ಚಿತ್ರದಲ್ಲಿ ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಅವರೇ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜಕ್ಕೂ ಕನ್ನಡದಲ್ಲೂ ಅಮಲಾ ಪೌಲ್ ನಟಿಸುತ್ತಾರಾ? ಕುತೂಹಲ ಮೂಡಿದೆ.

ಯಾಕಂದ್ರೆ ತಮಿಳಿನಲ್ಲಿ ಧನುಷ್ ಜತೆಗೆ ಅಮಲಾ ಪೌಲ್ ಕಾಣಿಸಿಕೊಂಡಿದ್ದರು. ಆದ್ದರಿಂದ ಕನ್ನಡದಲ್ಲೂ ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇದುವರೆಗೂ ಅಧಿಕೃತವಾಗಿ ಹೇಳಲಾಗಿಲ್ಲ. ರಾಕ್ ಲೈನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಅವರೇ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.