
ಮಂಗಳೂರು, ಆ.15: ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ 70ನೆ ಸ್ವಾತಂತ್ರೋತ್ಸವವನ್ನು ಇಂದು ಬೆಳಗ್ಗೆ ಸಂಭ್ರಮದಿಂದ ಆಚರಿಸಲಾಯಿತು.

ಮನಪಾ ಮೇಯರ್ ಹರಿನಾಥ್ ಧ್ವಜರೋಹಣ ನೆರವೇರಿಸಿ, ಧ್ವಜ ವಂದನೆ ಸಲ್ಲಿಸಿದರು. ಬಳಿಕ ಅವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಉಪ ಮೇಯರ್ ಸುಮಿತ್ರಾ ಕರಿಯ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮೊದಲಾದ ಗಣ್ಯರು, ಮನಪಾ ಸಿಬ್ಬಂದಿ ಉಪಸ್ಥಿತರಿದ್ದು, ಸಾತಂತ್ರೋತ್ರವದ ಸಂಭ್ರಮಾಚರಣೆ ಮಾಡಿದರು.
Comments are closed.