
ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೃಪ್ತಿ ಹೊಂದಿರುತ್ತಾರಲ್ಲದೆ, ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ, ಸ್ವಾವಲಂಬಿಗಳಾಗಿರುತ್ತಾರೆ ಎಂದು ಮನಶಾಸ್ತ್ರಜ್ಞರು ಹಲವು ಅಧ್ಯಯನ ವರದಿಗಳ ಮೂಲಕ ಕಂಡುಕೊಂಡಿದ್ದಾರೆ.
ಯೂನಿರ್ವಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರಾಧ್ಯಾಪಕರಾದ ಡಾ. ಬೆಲ್ಲಾ ಡೇಪೌಲೊ, ಸಾಮಾನ್ಯವಾಗಿ ಅವಿವಾಹಿತರು ಒಬ್ಬಂಟಿ ಹಾಗೂ ದುಃಖದಲ್ಲಿರುತ್ತಾರೆ ಎಂಬ ಅಭಿಪ್ರಾಯ ಇದೆ. ಆದರೆ ಇದು ವಾಸ್ತವಾಂಶ ಅಲ್ಲ. ಅವಿವಾಹಿತರು ಉಳಿದವರಿಗಿಂತ ಅರ್ಥಪೂರ್ಣ ಜೀವನ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
ಅಮೆರಿಕದ ಮನಶಾಸ್ತ್ರ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಡಾ. ಬೆಲ್ಲಾ ಡೇಪೌಲೊ, ಅವಿವಾಹಿತರು ಸಮಾಜದಿಂದ ಪ್ರತ್ಯೇಕವಾಗಿರುತ್ತಾರೆ ಆದರೂ ಸಹ ತಮ್ಮ ಕೆಲಸಗಳಲ್ಲಿ ನೆಮ್ಮದಿ, ಸಂತೋಷ ಕಾಣುತ್ತಾರೆ. ಸ್ನೇಹಿತರು, ಸಂಬಂಧಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ, ಸ್ವಾವಲಂಬಿಲಯಾಗಿಯೂ ಇರುತ್ತಾರೆ ಅಷ್ಟೇ ಅಲ್ಲದೆ ಅವಿವಾಹಿತರು ಋಣಾತ್ಮಕ ಭಾವನೆ ಹೊಂದಿರುವುದಿಲ್ಲ ಇವೆಲ್ಲವೂ ಸುಮಾರು 841 ಅಧ್ಯಯನದಿಂದ ಸ್ಪಷ್ಟವಾಗಿದೆ ಎಂದು ಡಾ. ಬೆಲ್ಲಾ ಡೇಪೌಲೊ ತಿಳಿಸಿದ್ದಾರೆ.
ವಿವಾಹಿತರು ಅತ್ಯಂತ ಹೆಚ್ಚು ಕಾಲ, ಅರೋಗ್ಯವಾಗಿ ಬದುಕುತ್ತಾರೆ ಎಂಬ ನಂಬಿಕೆ ಇದೆ, ಆದರೆ ಇದನ್ನು ವಿಜ್ಞಾನಕ್ಕಿಂತ ಆದರ್ಶದ ದೃಷ್ಟಿಯಿಂದ ಹೇಳಲಾಗಿದೆ. ಆದರೆ ವಾಸ್ತವದಲ್ಲಿ ವಿವಾಹಿತರಿಗಿಂತ ಅವಿವಾಹಿತರು ಅತ್ಯುತ್ತಮ, ಅರ್ಥಪೂರ್ಣ ಜೀವನವನ್ನು ನಡೆಸುತ್ತಾರೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ ಎಂದು ಡಾ. ಬೆಲ್ಲಾ ಡೇಪೌಲೊ ತಿಳಿಸಿದ್ದಾರೆ. ಮತ್ತೊಂದು ಸಂಶೋಧನೆಯ ಪ್ರಕಾರ, ವಿವಾಹಿತರಿಗಿಂತ ಅವಿವಾಹಿತರು ಅರ್ಥಪೂರ್ಣ ಕೆಲಸಗಳನ್ನು ಹೆಚ್ಚು ಮೌಲ್ಯಯುತವಾಗಿ ಕಾಣುತ್ತಾರೆ ಎಂದು ತಿಳಿದುಬಂದಿದೆ.
Comments are closed.