ಕರ್ನಾಟಕ

ಸಾಲ ಮರುಪಾವತಿ ಮಾಡದ ವ್ಯಕ್ತಿಯ ಪತ್ನಿ ಮಕ್ಕಳಿಗೆ ಗೃಹ ಬಂಧನದ ಶಿಕ್ಷೆ

Pinterest LinkedIn Tumblr

salaಕೋಲಾರ: ಸಾಲ ಮರುಪಾವತಿ ಮಾಡದೆ ಇದ್ದ ವ್ಯಕ್ತಿಯ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಂಧಿಸಿಟ್ಟಿದ್ದ ಹೇಯ ಕೃತ್ಯ ಕೋಲಾರ ಜಿಲ್ಲೆಯಲ್ಲಿ ವರದಿಯಾಗಿದೆ.

ಕೋಲಾರ ಜಿಲ್ಲೆಯ ರೆಹಮತ್ ನಗರದಲ್ಲಿ ಈ ಘಟನೆ ನಡೆದಿದ್ದು, ಗೃಹ ಬಂಧನದಲ್ಲಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

ಸಯೀದ್ ಅನ್ಸರ್ (42) ಆತನ ಪತ್ನಿ ವಹೀದಾ ಬೇಗಂ ಹಾಗೂ ಇಬ್ಬರು ಮಕ್ಕಳು ಇಶ್ರಾತ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಚಿಟ್ ಫಂಡ್ ವ್ಯವಹಾರದಲ್ಲಿ ಇಶ್ರಾತ್‌ಗೆ ಅನ್ಸರ್ ಎರಡು ಲಕ್ಷ ರೂಪಾಯಿ ನೀಡಬೇಕಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇಶ್ರಾತ್ ಕಾಟ ತಾಳಲಾರದೆ ಸಹೀದ್ ಅನ್ಸರ್ ಕಳೆದ ತಿಂಗಳು ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಮನೆ ಮಾಲೀಕರಾಗಿರುವ ಇಶ್ರಾತ್ ಆಕೆಯ ತಮ್ಮ ತಬ್ರೇಜ್ ಜೊತೆ ಸೇರಿ ಸಯೀದ್‌ನ ಪತ್ನಿ ವಹೀದಾ ಬೇಗಂ ಹಾಗೂ ಆಕೆಯ ಎರಡು ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿದ್ದರು ಎಂದು ಕೋಲಾರ ಟೌನ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ್ ತಿಳಿಸಿದ್ದಾರೆ.

Comments are closed.