ಮುಂಬಯಿ: ದೀಪಿಕಾ ಲಕ್ ಅದೆಷ್ಟು ಚೆನ್ನಾಗಿದೆ ಅಂದರೆ, ನಟಿಸಿದ ಚಿತ್ರಗಳಲ್ಲಿ ಸಂಭಾವನೆ ಅಲ್ಲದೆ, ಗೆಲುವಿನಿಂದ ಬಂದ ಶೇರ್’ಗಳನ್ನೂ ಪಡೆಯೋವಷ್ಟು ಎನ್ನಬಹುದು.
ಪೀಕು ಚಿತ್ರಕ್ಕೆ ದೀಪಿಕಾ 8 ಕೋಟಿ ಸಂಭಾವನೆ ಪಡೆದಿದ್ದರು. ಪ್ರಾಫಿಟ್’ನಲ್ಲಿ ಸ್ವಲ್ಪ ಶೇರ್ ಕೂಡ ಬಂದಿತ್ತು. ಇದೀಗ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ದೀಪಿಕಾ ಪ್ರಾಫಿಟ್ ನಲ್ಲಿ ಶೇರ್ ಕೇಳಿದ್ದಾರೆ. ಆದರೆ, ಅದನ್ನು ಕೊಡಲು ಒಪ್ಪದ ಚಿತ್ರದ ನಿರ್ದೇಶಕರು, 12.62 ಕೋಟಿ ಮೌಲ್ಯದ ಫ್ಲ್ಯಾಟ್ ಕೊಡಲು ಒಪ್ಪಿಕೊಂಡಿದ್ದಾರೆ.
ಬಾಲಿವುಡ್’ನಲ್ಲಿ ನಾಯಕಿಯರಿಗೆ ಪ್ರಾಫಿಟ್’ನಲ್ಲಿ ಶೇರ್ ಕೊಡುವ ಪದ್ಧತಿಯಿಲ್ಲ. ಇದು ಹೀರೋಗಳಿಗೇ ಸೀಮಿತವಾಗಿದೆ ಹೀಗಾಗಿಯೇ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಬಾಲಿವುಡ್ ಇಂಡಸ್ಟ್ರಿಯ ಲಿಂಗ ತಾರತಮ್ಯ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

Comments are closed.