
ಬೆಂಗಳೂರು ಆ.5 : ಇತ್ತೀಚಿಗಷ್ಟೆ ಬೆಲ್ಜಿಯಂ’ನಲ್ಲಿ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸ್ನೇಹಿತರಲ್ಲಿ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ನಟಿಸಿರುವ ಕಿರುತರೆ ನಟಿ ಚೈತ್ರ ಅವರು ಇದ್ದರು. ಅವರ ಬಗ್ಗೆ ಇರುವ ಊಹಪೋಹದ ಬಗ್ಗೆ ನಟಿ ಸ್ಪಷ್ಟಿಕರಣ ನೀಡಿ ಸತ್ಯವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಫೇಸ್’ಬುಕ್ ಪುಟದಲ್ಲಿ ನಿನ್ನೆ ಆ.4 ರಂದು 04/08/2016 ಬರೆದುಕೊಂಡಿರುವ ಚೈತ್ರ ಅವರ ಸಂಕ್ಷಿಪ್ತ ವಿವರ ಈಗಿದೆ.
ಸ್ನೇಹಿತರೆ,
‘ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಹಿಂದಿನ ಘಟನೆಗಳ ಬಗ್ಗೆ ತಮ್ಮನ್ನು ಸೇರಿಸಿರುವುದಕ್ಕೆ ನನಗೆ ತುಂಬ ದುಃಖವಾಗಿದ್ದು, ಈ ವಿಷಯದ ಬಗ್ಗೆ ಎಲ್ಲರೊಂದಿಗೂ ಹಂಚಿಕೊಳ್ಳಲೇ ಬೇಕಾಗಿರುವ ಸಮಯ ಇದಾಗಿದೆ. ಸಾಮಾನ್ಯವಾಗಿ ನಾನು ಈ ರೀತಿಯ ಸುಳ್ಳಿನ ಸುದ್ದಿ ಹಬ್ಬಿಸುವ ವಿಕೃತ ಮನಸ್ಸುಳ್ಳವರ ಬಗ್ಗೆ ಹೆದರುವುದಿಲ್ಲ.
ನಾನು ರಾಕೇಶ್ ಸಿದ್ದರಾಮಯ್ಯ ಅವರ 2ನೇ ಪತ್ನಿ, ಬೆಲ್ಜಿಯಂ ಪ್ರವಾಸದಲ್ಲಿ ನಾನು ಅವರ ಜೊತೆಯಿದ್ದು ಡ್ರಗ್ ಸೇವನೆ ಮತ್ತಿತ್ತರ ಸುದ್ದಿಗಳಿರುವ ಪೋಸ್ಟ್’ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನಾನು ಎಲ್ಲೆಡೆ ನೋಡಿದ್ದೇನೆ. ಇದು ಸಂಪೂರ್ಣ ಸುಳ್ಳಿನ ಸುದ್ದಿ. ನಾನು ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ಯಲ್ಲಿ ನಟಿಸಿರುವ ಏಕೈಕ ನಟಿ ಆ ಧಾರಾವಾಹಿಯಲ್ಲಿ ಇಬ್ಬರು ನಟಿಯರಿಲ್ಲ. ಇರುವುದು ನಾನೊಬ್ಬಳೆ.
ಅಲ್ಲದೆ ನಾನು ರಾಕೇಶ್ ಸಿದ್ದರಾಮಯ್ಯ ಅವರ ಜೊತೆ ಬೆಲ್ಜಿಯಂ’ಗೆ ಹೋಗಿರಲಿಲ್ಲ. ರಾಕೇಶ್ ಸಿದ್ದರಾಮಯ್ಯ ಮೃತಪಡುವ ದಿನ ನಾನು ಚಿತ್ರೀಕರಣದಲ್ಲಿ ಭಾಗಿ ಯಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈ ರೀತಿಯ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡುತ್ತಿರುವವರಿಗೂ ನನ್ನ ಈ ಉತ್ತರ ಅನ್ವಯಿಸುತ್ತದೆ. ಇದು ನನ್ನ ಸ್ಪಷ್ಟಿಕರಣ ಸ್ನೇಹಿತರೆ.
-ಧನ್ಯವಾದಗಳು
ವರದಿ ಕೃಪೆ ; ಸುವರ್ಣ ನ್ಯೂಸ್..
Comments are closed.