ಕರಾವಳಿ

ಅಯುಷ್ ಆಸ್ಪತ್ರೆ ವತಿಯಿಂದ ಸ್ತನ್ಯಪಾನ ಸಪ್ತಾಹ – ಸಮರ್ಪಕ ಸ್ತನ್ಯಪಾನದಿಂದ ಸ್ವಾಸ್ಥ್ಯರಕ್ಷಣೆ :ಡಾ. ಆಶಾಜ್ಯೋತಿ ರೈ ಮಾಲಾಡಿ

Pinterest LinkedIn Tumblr

ayush_sthanyapana_1

ಮಂಗಳೂರು. ಅಗಸ್ಟ್.5: ವಿಶ್ವಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಿಲ್ಲಾ ಸರಕಾರಿ ಆರ್ಯುವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ ಅಯುಷ್, ಹ್ಯಾಟ್‌ಹಿಲ್ ಲಾಲ್‌ಬಾಗ್ ಮಂಗಳೂರು ಇವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಗರ್ಭೀಣಿ, ಬಾಣಂತಿ ಮತ್ತು ಮಹಿಳೆಯರಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಅಂಗನವಾಡಿ ಕೇಂದ್ರ ” ಅಕ್ಷರ ಸದನ” ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಯುಷ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಆಶಾಜ್ಯೋತಿ ರೈ ಮಾಲಾಡಿ ಇವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಇಂದು ಸ್ತನ್ಯಪಾನದಂತಹ ಪ್ರಾಕೃತಿಕ ಸಹಜ ವಿಚಾರವನ್ನು ಆಚರಣೆ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳಿ ಜಾಗ್ರತೆ ಮೂಡಿಸುವ ಅನಿವಾರ್ಯತೆ ಬಂದೊದಗಿರುವುದು ತುಂಬಾ ಬೇಸರ ತರುವಂತಹ ವಿಚಾರ. ಇವತ್ತಿನ ಕಾಲಘಟದಲ್ಲಿ ಕೂಡು ಕುಟುಂಬಗಳು ವಿಭಜನೆಯಾಗಿರುವುದರಿಂದ ಈ ಸಮಸೈ ನಮ್ಮನ್ನು ಕಾಡುತ್ತಿದೆ. ಗರ್ಭಶಯ ಪ್ರಾಕೃತಿಕ ಸ್ಥಿತಿಗೆ ಬರಲು ಸ್ತನ್ಯಪಾನ ಸಹಕಾರಿ ಎಂದು ಹೇಳಿದರು.

ayush_sthanyapana_2 ayush_sthanyapana_3 ayush_sthanyapana_4 ayush_sthanyapana_5 ayush_sthanyapana_6 ayush_sthanyapana_7 ayush_sthanyapana_8 ayush_sthanyapana_9

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಅಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯ ಡಾ.ದೇವದಾಸ್ ಕೆ.ಪುತ್ರನ್ ಅವರು, ಶಿಶುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸದೃಢ ಸಶಕ್ತ ಸ್ವಾಸ್ಥ್ಯ ಶರೀರ ಹಾಗೂ ದೀರ್ಘಾಯುಷ್ಯಕ್ಕಾಗಿ ಸಮರ್ಪಕ ಸ್ತನ್ಯಪಾನ ಅತ್ಯವಶ್ಯಕ. ಅದುದ್ದರಿಂದ ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಮಗು ಸ್ತನ್ಯಪಾನದಿನದಿಂದ ವಂಜಿತರಾಗದಂತೆ ಎಚ್ಚರಿಕೆ ವಹಿಸುವಂತೆ ಮಾತೆಯರಿಗ ಅವರು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆಯುಷ್ ಆಸ್ಪತ್ರೆಯ ಶುಶ್ರೂಷಕಿ ಶ್ರೀಮತಿ ಸುನಂದ ಡಿ.ಆರ್., ಅವರು ಆಯುರ್ವೇದದ ಶಾಸ್ತ್ರೋಕ್ತ ಮಾಹಿತಿಗಳೊಂದಿಗೆ ಸ್ತನ್ಯಪಾನದ ಮಹತ್ವವನ್ನು ವಿವರಿಸಿದರು.

ayush_sthanyapana_10 ayush_sthanyapana_11 ayush_sthanyapana_12 ayush_sthanyapana_13 ayush_sthanyapana_14 ayush_sthanyapana_15 ayush_sthanyapana_16 ayush_sthanyapana_17 ayush_sthanyapana_18 ayush_sthanyapana_19 ayush_sthanyapana_20 ayush_sthanyapana_21 ayush_sthanyapana_22 ayush_sthanyapana_23 ayush_sthanyapana_24 ayush_sthanyapana_25 ayush_sthanyapana_26 ayush_sthanyapana_27 ayush_sthanyapana_28 ayush_sthanyapana_29 ayush_sthanyapana_30 ayush_sthanyapana_31 ayush_sthanyapana_32 ayush_sthanyapana_33 ayush_sthanyapana_34 ayush_sthanyapana_35 ayush_sthanyapana_36 ayush_sthanyapana_37 ayush_sthanyapana_38 ayush_sthanyapana_39 ayush_sthanyapana_40 ayush_sthanyapana_41 ayush_sthanyapana_42

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಹಾಗೂ ಸ್ಥಳೀಯ ಸಮಾಜ ಸೇವಾ ಕಾರ್ಯಕರ್ತ ವಾಸುದೇವ ಬೋಳೂರು ಅವರು ಕಾರ್ಯಕ್ರಮಕ್ಕೆ ಶುಭಾ ಕೋರಿ, ಸಮಾಜಕ್ಕೆ ಒಳಿತಾಗುವ ಯಾವೂದೇ ಉತ್ತಮ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ವಾರ್ಡಿನ ಮಾಜಿ ಕಾರ್ಪೋರೇಟರ್ ಶ್ರೀ ಕಮಲಾಕ್ಷ ಸಾಲ್ಯಾನ್ ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರಿಮತಿ ಜಲಜಾಕ್ಷಿ ಕಸ್ಬಾ ಬೆಂಗ್ರೆ ಅವರು, ಗರ್ಭೀಣಿ, ಬಾಣಂತಿ ಮತ್ತು ಮಹಿಳೆಯರಿಗೆ ಕೆಲವೊಂದು ಉಅಪಯುಕ್ತ ಸಲಹೆಗಳನ್ನು ನೀಡಿದರು.

” ಅಕ್ಷರ ಸದನ”ದ ಅಂಗನವಾಡಿ ಶಿಕ್ಷಕಿ ಕುಮುದಾವತಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಾಹಿಸಿದರು.

Comments are closed.