ಕರಾವಳಿ

ವ್ಯಾಪಕ ಟೀಕೆ ಹಿನ್ನೆಲೆ : ವಾರ್ಷಿಕ ವೇತನ 15 ಕೋಟಿ ರೂ. ಮಾತ್ರ ಸಾಕು ಎಂದ ಮುಖೇಶ್ ಅಂಬಾನಿ

Pinterest LinkedIn Tumblr

Mukesh Ambani

____ಮುಂಬೈಆ.05: ರಿಲಯನ್ಸ್‌ಇಂಡಸ್ಟೀಯಲ್ ಚೇಯರ್‌ಮ್ಯಾನ್ ಮುಖೇಶ್ ಅಂಬಾನಿ ಪಡೆಯೋ ವೇತನದಲ್ಲೂ ವಿಭಿನ್ನತೆ ಮೆರೆದಿದ್ದಾರೆ. ಸತತ 8 ವರ್ಷಗಳಿಂದ ತಮ್ಮ ವಾರ್ಷಿಕ ವೇತನ 15 ಕೋಟಿ ರೂಪಾಯಿ ಪಡೆಯುತ್ತಿದ್ದು, ಈ ಬಾರಿಯೂ ಇದನ್ನೇ ಮುಂದುವರೆಸಿದ್ದಾರೆ.

ಈ ಮೂಲಕ ವಾರ್ಷಿಕ ಆಧಾರದ ಮೂಲಕ ದೊರೆಯಲಿರುವ 24 ಕೋಟಿ ರೂಪಾಯಿಗಳಿಗೆ ವಿನಾಯಿತಿ ನೀಡಿದ್ದಾರೆ. ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರಿಗೆ ನೀಡುವ ವೇತನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಆಡಳಿತ ಮಂಡಳಿಯಲ್ಲಿರುವ ಮುಖೇಶ್ ಪತ್ನಿ ನೀತಾ ಅಂಬಾನಿಗೆ 1.2 ಕೋಟಿ ಗೌರವಧನ ತಲುಪುತ್ತಿದೆ.

ಮುಖೇಶ್ ಅಂಬಾನಿಗೆ 2008-09 ರಲ್ಲಿ ವಾರ್ಷಿಕ 15 ಕೋಟಿ ರೂ. ಗೌರವಧನ ನಿಗದಿ ಮಾಡಲಾಗಿತ್ತು. ಆ ವರ್ಷ ಅವರು ದೇಶದ ಅತ್ಯಧಿಕ ವೇತನ ಪಡೆಯುವ ಸಿಇಓ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆದ್ರೆ ದೇಶದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಮುಖೇಶ್ ಇದ್ರೂ ವೇತನ ಪಡೆಯುತ್ತಾರೆ ಎಂಬ ಟೀಕೆಗಳು ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ 15 ಕೋಟಿ ರೂ. ವೇತನ ಸಾಕು, ಅದಿಕ್ಕಿಂತ ಒಂದು ರೂಪಾಯಿ ಹೆಚ್ಚು ನನಗೆ ಬೇಡ ಎಂದು ಅಂಬಾನಿ ನಿರ್ಧರಿಸಿದಂತಿದೆ. ಇತ್ತೀಚೆಗೆ ದಾಖಲೆ ವೇತನ ಪಡೆಯುವ ಸಿಇಓಗಳ ನಡುವೆ ಅತಿದೊಡ್ಡ ಕಂಪನಿಯ ಮುಖ್ಯಸ್ಥನಾಗಿಯೂ ಕಡಿಮೆ ವೇತನ ಪಡೆದು ಅಂಬಾನಿ ಮಾದರಿಯಾಗಿದ್ದಾರೆ.

Comments are closed.