ಚೆನ್ನೈ: ತಮಿಳು ಖ್ಯಾತ ನಟ ವಿಕ್ರಮ್ ಪುತ್ರಿ ಅಕ್ಷಿತಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮನು ರಂಜಿತ್ ಎಂಬಾತರ ಜತೆಗೆ ವಿಕ್ರಮ್ ಪುತ್ರಿಯ ಎಂಗೇಜ್‌ಮೆಂಟ್ ಆಗಿತ್ತು. ಮನು ರಂಜೀತ್ ಖ್ಯಾತ ರಾಜಕಾರಿಣಿಯೊಬ್ಬರ ಮೊಮ್ಮಗ.. ಸದ್ಯ ಸುದ್ದಿ ಪ್ರಕಾರ ವಿಕ್ರಮ್ ಪುತ್ರಿ ಅಕ್ಷಿತಾ ತಮ್ಮ ಎಂಗೇಜ್‌ಮೆಂಟ್ ರಿಂಗ್‌ನ್ನು ಕಳೆದುಕೊಂಡಿದ್ದಾರಂತೆ.
ಅವರ ಹತ್ತಿರ ಕೈಯಲಿದ್ದ ಉಂಗರವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಅಕ್ಷಿತಾ ಹೇಳಿದ್ದಾರೆ.
ನಾನು ಪ್ರಸಿದ್ಧ ಐಸ್ ಕ್ರೀಮ್ ಪಾರ್ಲರ್‌ಗೆ ತೆರಳಿದ್ದೆ, ಪಾರ್ಲರ್‌ನಿಂದ ಹೊರ ಬರುತ್ತಿದ್ದ ವೇಳೆ ರಿಂಗ್ ಕೈಯಲ್ಲಿ ಇರದೇ ಇರುವುದು ಗೊತ್ತಾಗಿದೆಯಂತೆ. ಈ ಸಂಬಂಧ ಅವರು, ತಕ್ಷಣಕ್ಕೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ನಟ ವಿಕ್ರಮ್ ತಮ್ಮ ಮುಂಬರುವ ಚಿತ್ರ ಈರು ಮುಗನ್ ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ನಿನ್ನೆ ಚೆನ್ನೈನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು.
Comments are closed.