ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಗುಜರಾತ್ ನಲ್ಲಿ ಬಿಜೆಪಿ ಕಳೆಗುಂದುತ್ತಿದ್ದು, ಪಕ್ಷದ ವರ್ಚಸ್ಸನ್ನು ಪುನರ್ ಸ್ಥಾಪಿಸಲು ಈಗಾಗಲೇ ನಾಯಕತ್ವ ಬದಲಾವಣೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಈಗ ಆಘಾತಕಾರಿ ಸಮೀಕ್ಷೆಯೊಂದು ಹೊರಬಿದ್ದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ ಗುಜರಾತ್ ನಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ಆರ್ಎಸ್ಎಸ್ ಆಂತರಿಕ ಸಮೀಕ್ಷೆ ಹೇಳಿದೆ.
ವರದಿಗಳ ಪ್ರಕಾರ, 182 ಸದಸ್ಯ ಬಲವನ್ನು ಹೊಂದಿರುವ ಗುಜರಾತ್ ವಿಧಾನಸಭೆ ಈಗ ಚುನಾವಣೆ ನಡೆದರೆ, ಬಿಜೆಪಿ ಕೇವಲ 60ರಿಂದ 65 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ,
ಉನಾ ದಲಿತರ ಮೇಲಿನ ಹಲ್ಲೆ ಹಾಗೂ ಪಟೇಲ್ ಚಳುವಳಿಯ ನಂತರ ಮತದಾರರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದನ್ನು ತಿಳಿಯಲು ಆರ್ಎಸ್ಎಸ್ ಎರಡು ವಾರಗಳ ಕಾಲ ಈ ಸಮೀಕ್ಷೆ ನಡೆಸಿದೆ.
ಈ ಸಮೀಕ್ಷೆಯ ಆರ್ಎಸ್ಎಸ್ ನಾಯಕರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿ ಬೇನ್ ಪಟೇಲ್ ಅವರ ಬದಲಾವಣೆಗೆ ಸೂಚಿಸಿತ್ತು ಎನ್ನಲಾಗಿದೆ.
Comments are closed.