ಮನೋರಂಜನೆ

ವಿಶ್ವಸಂಸ್ಥೆಯಲ್ಲಿ ಸಂಗೀತ ಪ್ರದರ್ಶನ ನೀಡುತ್ತಿರುವ 2ನೇ ಭಾರತೀಯ ರೆಹಮಾನ್

Pinterest LinkedIn Tumblr

Rahman70ನೇ ಭಾರತ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ವಿಶ್ವಸಂಸ್ಥೆಯಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಪ್ರದರ್ಶನ ನೀಡಲಿದ್ದು, ಎಂ.ಎಸ್ ಸುಬ್ಬಲಕ್ಷ್ಮೀ ತರುವಾಯ ಪ್ರದರ್ಶನ ನೀಡುತ್ತಿರುವ ಭಾರತೀಯನಾಗಿದ್ದಾರೆ.

1966ರ ಆಗಸ್ಟ್ 15ರಂದು ಸಂಗೀತ ವಿದುಷಿ ಎಂ.ಎಸ್‌. ಸುಬ್ಬಲಕ್ಷ್ಮೀ ಅವರು ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಪ್ರದರ್ಶನ ನೀಡಿದ್ದರು. ಇದೀಗ ಸುಬ್ಬಲಕ್ಷ್ಮಿ ಅವರ ಪ್ರದರ್ಶನಕ್ಕೆ 50 ವರ್ಷ ತುಂಬಲಿದ್ದು ಈ ವೇಳೆ ರೆಹಮಾನ್ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೆಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

ರೆಹಮಾನ್ ಅವರು ಹಲವು ಗೀತೆಗಳನ್ನು ಹಾಡಲಿದ್ದಾರೆ ಎಂದು ಸೆಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.

Comments are closed.