ಬೆಂಗಳೂರು, ಜು .31- ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ಐಟಿಐ ಕಾರ್ಖಾನೆ ಬಳಿ ಪಾದಚಾರಿ ಮಾರ್ಗದಲ್ಲಿ ತಮ್ಮ ಹಿಂಬಾಲಕರಿಗೆ ಕಾನೂನು ಬಾಹಿರವಾಗಿ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಪ್ರಭಾವ ಬೀರಿ ನೆರವಾಗಿದ್ದ ಶಾಸಕ ಭೈರತಿ ಬಸವರಾಜ ಹಾಗೂ ಐವರು ಅಧಿಕಾರಿಗಳ ವಿರುದ್ಧ ಬಿಎಂಟಿಎಫ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಕೆ.ಆರ್.ಪುರ ಐಟಿಐ ಕಾರ್ಖಾನೆ ಬಳಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ವಾಣಿಜ್ಯ ಮಳಿಗೆಗಳ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಅಂದಿನ ಬಿಬಿಎಂಪಿ ಆಯುಕ್ತ ಕುಮಾರ ನಾಯಕ್, ಜೆಸಿ ಉಮಾನಂದಾ ರೈ, ಮುಖ್ಯ ಇಂಜಿನಿಯರ್ ಪರಮೇಶ್ವರಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ರಂಗನಾಥ್ , ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪರಮೇಶ್ ಗೌಡ ವಿರುದ್ಧ ಬಿಎಂಟಿಎಫ್ ಪೊಲೀಸರು ಕಳೆದ 26 ರಂದೇ ಎಫ್‍ಐಆರ್ ದಾಖಲಿಸಿ ಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಅಧಿಕಾರ ದುರುಪಯೋಗ , ಅತಿಕ್ರಮ ಪ್ರವೇಶ ಮತ್ತು ಸರ್ಕಾರಿ ಆಸ್ತಿ ಕಬಳಿಕೆಗೆ ನೆರವು ನೀಡಿರುವ ಪ್ರಕರಣಗಳನ್ನು ದಾಖಲಿಸಿರುವ ಬಿಎಂಟಿಎಫ್ ಪೊಲೀಸರು ಆರೋಪಿಗಳ ವಿರುದ್ದ 90 ದಿನಗಳೊಳಗಾಗಿ ಚಾರ್ಜ್ ಶೀಟ್ ಸಲ್ಲಿಸಬೇಕಿದೆ.
Comments are closed.