ಮನೋರಂಜನೆ

ಚಿರಂಜೀವಿ 150ನೇ ಸಿನೆಮಾಗೆ ಕಾಜಲ್ ಅಗರವಾಲ್ ಹೀರೋಯಿನ್

Pinterest LinkedIn Tumblr

kajal-agarwal-PTIಚೆನ್ನೈ: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಇನ್ನೂ ಹೆಸರಿಡದ ಮುಂದಿನ ಚಲನಚಿತ್ರಕ್ಕೆ ನಟಿ ಕಾಜಲ್ ಅಗರವಾಲ್ ಹೀರೋಯಿನ್. ತಮಿಳು ಸೂಪರ್ ಹಿಟ್ ಸಿನೆಮಾ ‘ಕತ್ತಿ’ಯ ರಿಮೇಕ್ ಸಿನೆಮಾ ಇದಾಗಿದ್ದು, ಚಿರಂಜೀವಿಯವರ 150 ನೆಯ ಸಿನೆಮಾ ಕೂಡ.

“ಕಳೆದ ವಾರದವರೆಗೂ ಅವರನ್ನು ನಾವು ಗಣನೆಗೆ ತೆಗೆದುಕೊಂಡಿದ್ದೆವು, ಈಗ ಅಂತಿಮವಾಗಿ ಕಳೆದ ಸಂಜೆ ಅವರು ಸಹಿ ಮಾಡಿದ್ದಾರೆ. ಅತಿ ಪ್ರತಿಷ್ಠಿತ ಯೋಜನೆ ಇದಾಗಿರುವುದರಿಂದ ಅವರು ಬಹಳ ಉತ್ಸುಕರಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಅವರು ಮೂರು ಸಿನೆಮಾಗಳು ಸರಣಿಯಾಗಿ ಸೋತಿದ್ದರು ಅಜಿತ್ ಅವರ ಮುಂದಿನ ತಮಿಳು ಸಿನೆಮಾ ಮತ್ತು ಚಿರಂಜೀವಿಯವರ ತೆಲುಗು ಸಿನೆಮಾ ಯೋಜನೆಯ ಭಾಗವಾಗುವ ಅವಕಾಶ ಪಡೆದಿದ್ದಾರೆ ಕಾಜಲ್.

ಚಿರಂಜೀವಿಯವರೊಂದಿಗೆ ಮೊದಲ ಬಾರಿಗೆ ನಟಿಸುತ್ತಿರುವ ಕಾಜಲ್ ಪಾತ್ರವನ್ನು ತಮಿಳಿನಲ್ಲಿ ಸಮಂತಾ ನಟಿಸಿದ್ದರು. ವಿ ವಿ ವಿನಾಯಕ್ ನಿರ್ದೇಶಿಸುತ್ತಿರುವ ಈ ಸಿನೆಮಾವನ್ನು ರಾಮ್ ಚರಣ್ ನಿರ್ಮಿಸುತ್ತಿದ್ದಾರೆ.

Comments are closed.