ಕರ್ನಾಟಕ

ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ವಿರೋಧಿಸಿ ಚಿತ್ರರಂಗದವರಿಂದ ಮೆರವಣಿಗೆ; ಗಾಂಧಿನಗರದಲ್ಲಿ ಕಲ್ಲು ತೂರಾಟ

Pinterest LinkedIn Tumblr

maha4

ಬೆಂಗಳೂರು: ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹಾಗೂ ಚಿತ್ರರಂಗದವರು ನಗರದಲ್ಲಿ ನಡೆಸಿದ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆಸಲಾಗಿದೆ.

ಪುರಭವನದಿಂದ ಹೊರಟ ಮೆರವಣಿಗೆಯು ಗಾಂಧಿನಗರದ ಮಾರ್ಗವಾಗಿ ಮೆಜೆಸ್ಟಿಕ್ ಕಡೆ ತಲುಪುವ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

maha45

ಗಾಂಧಿನಗರದ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕಲ್ಲು ತೂರಲಾಗಿದ್ದು, ಕೂಡಲೇ ಪೊಲೀಸರು ಗುಂಪುಗೂಡಿದ್ದ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಇಂದಿನ ಬೃಹತ್ ಱ್ಯಾಲಿ ಸಂಪೂರ್ಣ ಶಾಂತಿಯುತವಾಗೇ ನಡೆದಿದ್ದು, ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಶಾಂತಿಗೆ ಭಂಗ ತರುವ ಪ್ರಯತ್ನ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿಯ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

Comments are closed.