
ಥಾಣೆ: ತಮ್ಮ ಸಮಸ್ಯೆ ಹೇಳಿಕೊಂಡು ಬಂದ ದಂಪತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದ ನಕಲಿ ಬಾಬಾನೊಬ್ಬ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಆ ಪ್ರಚಂಡ ನಕಲಿ ಬಾಬಾ ಯೋಗೇಶ್ ಕುಪೇಕರ್ ಈಗ ಪೊಲೀಸ್ ಕಷ್ಟಡಿಯಲ್ಲಿದ್ದು, ಪೊಲೀಸರು ಆತನ ಹಿನ್ನೆಲೆಯನ್ನೆಲ್ಲಾ ಜಾಲಾಡಲಾರಂಭಿಸಿದ್ದಾರೆ.
ದಂಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಎಲ್ಲಾ ವಿಚಾರ ಹೇಳಿಕೊಂಡಿದ್ದು, ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕಾಗಿ ಯಾರದೋ ಮಾತುಕೇಳಿಕೊಂಡು ಬಾಬಾ ಬಳಿ ತೆರಳಿದ್ದೆವು. ಆತ ನಮ್ಮಿಬ್ಬರನ್ನು ಬಂಧನದಲ್ಲಿರಿಸಿಕೊಂಡು ತನ್ನ ಮುಂದೆಯೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ತನ್ನ ಅಸಲಿ ರೂಪ, ವಿಕೃತ ಮನಸ್ಸನ್ನು ತೋರಿಸಿದ್ದಾನೆ. ನಮ್ಮಿಂದ ಸಾಕಷ್ಟು ಹಣ ಕಿತ್ತುಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ದಂಪತಿಗೆ ಇಂಥ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಿಂದಲೂ ಹೀಗೆ ಮಾಡಿಸುತ್ತಿದ್ದ ಎನ್ನಲಾಗಿದೆ. ಇಷ್ಟೆಲ್ಲಾ ಆದ ಬಳಿಕ ಬಾಬಾ ಮಹಿಳೆಗೆ ಕಿರುಕುಳ ಕೊಡಲಾರಂಭಿಸಿದ್ದಾನೆ. ಆಗ ದಂಪತಿ ಬಾಬಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ವರ್ತಕ್ ನಗರ ಪೊಲೀಸರು ಬಾಬಾನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಾಬಾನ ಕಿರುಕುಳ ಅನುಭವಿಸಿದ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಮೂಢನಂಬಿಕೆ ವಿರೋಧಿ ಕಾಯ್ದೆಯನ್ವಯ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ.
Comments are closed.